ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

Krishnaveni K

ಮಂಗಳವಾರ, 22 ಜುಲೈ 2025 (09:32 IST)
Photo Credit: X
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಸ್ಯಾಂಡಲ್ ವುಡ್ ತಾರೆಯರ ಜೊತೆಯೂ ನಂಟಿದೆ ಎನ್ನಲಾಗಿದ್ದು ಫೋಟೋಗಳು ವೈರಲ್ ಆಗಿದೆ.

ಶಾಸಕ ಬೈರತಿ ಬಸವರಾಜ್ ಈ ಮರ್ಡರ್ ಕೇಸ್ ನಲ್ಲಿ ಎ5 ಆರೋಪಿಯಾಗಿದ್ದಾರೆ. ಇದೇ ಪ್ರಕರಣದ ಎ1 ಆರೋಪಿ ಜಗದೀಶ್. ಈತನಿಗೆ ರಾಜಕಾರಣಗಳು ಮಾತ್ರವಲ್ಲ ಸಿನಿಮಾ ತಾರೆಯರ ಜೊತೆಗೂ ನಂಟಿದೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸ್ಯಾಂಡಲ್  ವುಡ್ ತಾರೆ ರಚಿತಾ ರಾಮ್ ಗೆ ಜಗದೀಶ್ ಸೀರೆ ಮತ್ತು ಆಭರಣ ಗಿಫ್ಟ್ ಮಾಡುವ ಮತ್ತು ಆತನ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿದೆ. ಈ ಫೋಟೋದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಇದ್ದಾರೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ ಸಮಯದಲ್ಲಿ ಈ ಫೋಟೋ ತೆಗೆಯಲಾಗಿದೆ.

ಆದರೆ ಈ ಫೋಟೋದಲ್ಲಿ ರಚಿತಾ ಕೈಯಲ್ಲಿರುವ ಸೀರೆ, ಒಡವೆ ರವಿಚಂದ್ರನ್ ಸಂಭಾವನೆ ಬದಲಾಗಿ ನೀಡಿರುವ ಗಿಫ್ಟ್ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ನಟಿಸಲು ರಚಿತಾ ಸಂಭಾವನೆ ಪಡೆದಿರಲಿಲ್ಲ. ಹೀಗಾಗಿ ಅದರ ಬದಲು ರವಿಚಂದ್ರನ್ ಅವರೇ ಗಿಫ್ಟ್ ನೀಡಿದ್ದರು ಎನ್ನಲಾಗಿದೆ. ಆದರೆ ಫೋಟೋದಲ್ಲಿ ರಚಿತಾ ಮತ್ತು ರವಿಚಂದ್ರನ್ ಜೊತೆ ಜಗದೀಶ್ ಗೆ ಇಷ್ಟೊಂದು ಆತ್ಮೀಯತೆ ಇರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಜಗದೀಶ್ ಗೆ ರಾಜಕಾರಣಿಗಳಲ್ಲದೆ ಸಿನಿಮಾ ತಾರೆಯರೂ ಪರಿಚಿತರು ಎನ್ನಲಾಗುತ್ತಿದೆ. ಈತನಿಂದಾಗಿ ರಚಿತಾ ರಾಮ್ ಕೂಡಾ ಅನಗತ್ಯ ವಿವಾದಕ್ಕೆ ಸಿಲುಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ