ಅದ್ನನ್ ನೂತನ ಆಲ್ಬಂ 'ಬೆಸ್ಟ್ ಫ್ರೆಂಡ್ಸ್'

ಶುಕ್ರವಾರ, 28 ಡಿಸೆಂಬರ್ 2007 (12:11 IST)
'ತೇರಾ ಚೆಹ್ರಾ' ಮತ್ತು ತನ್ನ ಕೊನೆಯ ಆಲ್ಬಂ 'ಕಿಸಿ ದಿನ್'ನ ಯಶಸ್ವೀ ಗೆಲುವಿನ ನಂತರ ಅದ್ನನ್ ಸಾಮಿ ಮತ್ತು ಭೂಷಣ್ ಕುಮಾರ್ ಮತ್ತೊಮ್ಮೆ ಒಂದಾಗಿ ನೂತನ ಆಲ್ಬಂನೊಂದಿಗೆ ಜೊತೆಗೂಡಿದ್ದಾರೆ.

'ಬೆಸ್ಟ್ ಫ್ರೆಂಡ್ಸ್' ಎಂಬ ಶೀರ್ಷಿಕೆಯನ್ನು ಹೊಂದಿದ ಈ ನೂತನ ಆಲ್ಬಂನ್ನು ಟಿ ಸಿರೀಸ್ ಡಿಸೆಂಬರ್ 27ರಂದು ಬಿಡುಗಡೆಗೊಳಿಸಿದ್ದು, ಸ್ಲಿಮ್ ಅದ್ನಾನಿ ಅವರ ವಿಭಿನ್ನ ರೂಪವನ್ನು ಪ್ರದರ್ಶಿಸುವ ಭರವಸೆಯನ್ನು ಹೊಂದಿದೆ.

ಈ ಆಲ್ಬಂನಲ್ಲಿರುವ ಸಮೀರ್ ಸಾಹಿತ್ಯ ನೀಡಿದ ಅಸ್ಸಲಾಂವಲೈಕುಂ ಎಂಬ ಹಾಡಿಗೆ ನೃತ್ಯನಿರ್ದೇಶಕ ರೆಮೋ ಅವರು ನಿರ್ದೇಶನ ನೀಡಿದ್ದಾರೆ.

ಕೇವಲ ಯುವಗಾಯಕರೊಂದಿಗೆ ಮಾತ್ರವಲ್ಲದೆ ನೃತ್ಯಗಾರೊಂದಿಗೆ ಕೂಡಾ ಅದ್ನನ್ ಹೇಗೆ ಸ್ಪರ್ಧಿಸಿದ್ದಾರೆ ಎಂಬುದು ಅತ್ಯಂತ ಆಸಕ್ತಿದಾಯಕವಾಗಿದೆ.ಯಾಕೆಂದರೆ ಈ ಆಲ್ಬಂ ಸಂಪೂರ್ಣ ನೃತ್ಯ ಆಲ್ಬಂ ಆಗಿದ್ದು ಫ್ರೆಂಚ್ ದಾಡಿ ಬಿಟ್ಟ ಸ್ಲಿಮ್ ಆಂಡ್ ಟ್ರಿಮ್ ಅದ್ನನ್ ಅವರ ನಿರ್ವಹಣೆಯು ಅತ್ಯಂತುತ್ತಮವಾಗಿದೆ.

ವೆಬ್ದುನಿಯಾವನ್ನು ಓದಿ