ಅನುಷ್ಕಗೆ ಟೈಮೇ ಇಲ್ಲಾ!.. ಯಾಕೇ ಗೊತ್ತೆ?

ಮಂಗಳವಾರ, 21 ಜನವರಿ 2014 (12:04 IST)
PR
ಅನುಷ್ಕಾಳಿಗೆ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುವ ಅವಕಾಶ. ರುದ್ರಮದೇವಿ, ಬಾಹುಬಲಿಯಂತಹ ಆಕ್ಷನ್ ಭರಿತ ಚಿತ್ರಗಳಂತೆ ಇದರ ಕಥೆ ಇಲ್ಲವಂತೆ. ಇದು ಟಾಲಿವುಡ್ ಹಾಟ್ ನ್ಯೂಸ್ ಆಗಿದೆ.

ಈ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಚೆಲುವೆ ಬಿಡುವಿಲ್ಲದಷ್ಟು ಕೆಲಸ . ಇನ್ನು ಎರಡು ವರ್ಷಗಳ ಕಾಲ ಯಾವ ಚಿತ್ರವನ್ನು ಅನುಷ್ಕ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಟಿ ಟೌನ್ ಮಂದಿ ಅಭಿಪ್ರಾಯ ಪಟ್ಟಿದ್ದರು, ಆದರೆ ಅವರ ಊಹೆಗೆ ತಣ್ಣೀರು ಎರಚಿ ಮತ್ತೊಂದು ಹೊಸ ಸಿನಿಮಾಕ್ಕೆ ಸೈನ್ ಹಾಕಿದ್ದಾಳೆ ಆ ಚೆಲುವೆ.

ತೆಲುಗಿನಲ್ಲಿ ಅಶೋಕ್ ನಿರ್ದೇಶನದ ಭಾಗಮತಿ ಚಿತ್ರದಲ್ಲಿ ನಟಿಸಲು ಸಿದ್ಧತೆ ನಡಿಸಿದ್ದಾರೆ. ಈ ಪಾತ್ರಕ್ಕೆ ಮತ್ಯಾರು ಸೂಟ್ ಆಗಲ್ಲ ಎಂದು ನಿರ್ಧರಿಸಿದ ನಿರ್ದೇಶಕರು ಆಕೆಯನ್ನೇ ಹುಡುಕಿಕೊಂಡು ಹೋಗಿ ಅವಕಾಶ ನೀಡಿದ್ದಾರೆ.ಅಲ್ಲದೆ ಗೌತಮ್ ಮೆನನ್ ಅವರ ಹೊಸ ಚಿತ್ರದಲ್ಲೂ ನಟಿಸುವ ಅವಕಾಶ ದೊರೆತಿದೆಯಂತೆ ! ತನ್ನ ಚಿತ್ರದಲ್ಲಿ ಇವಳನ್ನು ಗ್ಲಾಮರ್ ಬೊಂಬೆಯಾಗಿ ತೋರಿಸುವ ಉದ್ದೇಶ ಹೊಂದಿದ್ದಾರೆ ಗೌತಂ . ಟಿ ಟೌನ್ ಅನೇಕ ಮಂದಿ ಅನುಷ್ಕ ಕೆರಿಯರ್ ಮುಗಿದೇ ಹೋಯಿತು ಎಂದು ಕುಹುಕ ಆಡಿದ್ದರು. ಮದುವೆ ಮಾಡಿಕೊಂಡು ಹಾಯಾಗಿರು ಎಂದು ಸಲಹೆ ನೀಡಿದ್ದರು. ಆದರೆ ಅವರ ಬಾಯಿ ಮುಚ್ಚುವಂತೆ ಅನುಷ್ಕಾಳಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ.

ವೆಬ್ದುನಿಯಾವನ್ನು ಓದಿ