ಅಮಿತಾಭ್ ಈಗ ಐದು ಬಂಗಲೆಗಳ ಒಡೆಯ

ಶನಿವಾರ, 29 ಜೂನ್ 2013 (10:48 IST)
PR
PR
ಅಮಿತಾಭ್ಗೆ ತಮ್ಮ ಕುಟುಂಬ ದೊಡ್ಡದಾಗುತ್ತಿರುವುದರ ಗಮನ ಹರಿದಿದೆ. ಹೀಗಾಗಿ ಹಾಲಿ ನಿವಾಸ ಜಲ್ಸಾದಿಂದ ಹಿಂದಕ್ಕಿರುವ ವಿಸ್ತಾರವಾದ ಬಂಗಲೆಯನ್ನು 50 ಕೋಟಿ ನೀಡಿ ಖರೀದಿಸಿದ್ದಾರೆ. ಇದರಿಂದ ಅಮಿತಾಭ್ ಒಟ್ಟು 5 ಬೃಹತ್ ಬಂಗಲೆಯನ್ನು ಹೊಂದಿದಂತಾಗುತ್ತದೆ.

ಬಹು-ವಿಲೆ ಪಾರ್ಲೆ ಅಭಿವೃದ್ದಿ ಯೋಜನೆಯಲ್ಲಿ (ಜೆವಿಪಿಡಿ) ಪ್ರತೀಕ್ಷಾ (ಮೊದಲ ನಿವಾಸ), 2004ರಲ್ಲಿ ಖರೀದಿಸಿದ ಜಾನಕ್ (ಈಗ ಅದನ್ನು ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ), ಮೂರನೆಯದು ವತ್ಸ, ಈಗ ಅದನ್ನು ಸಿಟಿ ಬ್ಯಾಂಕ್ಗೆ ಲೀಸ್ಗೆ ನೀಡಲಾಗಿದೆ. ನಾಲ್ಕನೆಯದು ಈಗ ವಾಸವಾಗಿರುವ ಜಲ್ಸಾ ನಿವಾಸ, ಐದನೆಯದು ಈಗ ಹೊಸದಾಗಿ ಖರೀದಿಸುವ ಬಂಗಲೆ, ಅದಕ್ಕಿನ್ನೂ ಹೆಸರಿಟ್ಟಿಲ್ಲ.

750 ಚದರ ಯಾರ್ಡ ವಿಸ್ತೀರ್ಣದ ಈ ಹೊಸ ಬಂಗಲೆಯ ಇಂಟೀರಿಯರ್ ಕೆಲಸ ಈಗಾಗಲೇ ಆರಂಭವಾಗಿದೆ. ಕಳೆದೊಂದು ವರ್ಷದಿಂದ ಅಮಿತಾಭ್ ಹೊಸ ಮನೆಗಾಗಿ ಹುಡುಕಾಟ ನಡೆಸಿದ್ದಾರಂತೆ, ಆದರೆ ಮನೆ ಸಮೀಪದಲ್ಲೇ ಇದ್ದ ಬೃಹತ್ ಬಂಗಲೆಯತ್ತ ಅವರ ಗಮನ ಹರಿದಿತ್ತಂತೆ. ಅಲ್ಲಿ ವಾಸವಾಗಿದ್ದೆ ವೃದ್ದ ಮಹಿಳೆ ಮನೆ ಕೊಡಲು ಒಪ್ಪಿರಲಿಲ್ಲವಂತೆ. ಇದೀಗ ಅದೇ ವೃದ್ಧೆ ಮಾರಾಟಕ್ಕೆ ಮುಂದೆ ಬಂದಿದ್ದಾರೆ, ಇದು ತಿಳಿದ ಕೂಡಲೆ 50 ಕೋಟಿ ತೆತ್ತು ಅದನ್ನು ಖರೀದಿಸಿದ್ದಾರೆ ಅಮಿತಾಭ್.

ಹೊಸ ನಿಮಾಸಕ್ಕೂ, ಜಲ್ಸಾ ಬಂಗಲೆಗೂ ಒಂದೇ ಒಂದು ಗೋಡೆ ಇದ್ದು ಹಿಂದಕ್ಕೆ ವಿಸ್ತಾರವಾದ ಜಾಗವಿದೆಯಂತೆ. ಅಂದಹಾಗೆ ಹೊಸ ಬಂಗಲೆ ಅಮಿತಾಭ್ ಹಾಗೂ ಅಭಿಷೇಕ್ ಹೆಸರಿನಲ್ಲಿದೆ.

ವೆಬ್ದುನಿಯಾವನ್ನು ಓದಿ