ವಿಶ್ವ ಪ್ರಸಿದ್ಧ ಬ್ರಾಡ್ ಕಾಸ್ಟಿಂಗ್ ಕಂಪನಿ ಸಾಮಾನ್ಯವಾಗಿ ಯಾರು ಹೆಚ್ಚು ಜನಪ್ರಿಯ ಎನ್ನುವ ಸರ್ವೇ ಮಾಡುತ್ತಿರುತ್ತದೆ. ಇದರ ಅನ್ವಯ ಪ್ರಸಿದ್ಧ ಕಂಪನಿಗಳು ತಮ್ಮ ಪ್ರಾಡಕ್ಟ್ ಗಳಿಗೆ ಸೆಲಬ್ರಿತಿಗಲನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ ಬ್ರಾಂಡ್ ಅಂಬಾಸಿಡರ್ ಆಗಿ. ಕಳೆದ ನಾಲ್ಕು ವರ್ಷಗಳಿಂದ ಅಮೀರ್ ಹೆಚ್ಚು ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಆದರೆ ಈ ವರ್ಷ ನಡೆಸಿದ ಸರ್ವೆಯಲ್ಲಿ ಅಮೀರ್ ಖಾನ್ ಗೆ ಎದುರಾಳಿ ಆಗಿ ಒಬ್ಬ ಹೀರೋಯಿನ್ ಬಂದಿದ್ದಾಳೆ. ದೀಪಿಕಾ ಪಡುಕೋಣೆ ಆ ಜಾಗಕ್ಕೆ ಬಂದಿದ್ದಾಳೆ. ಕಳೆದ ವರ್ಷ ಆಕೆ ನೀಡಿದ್ದ ಯಶಸ್ವಿ ಚಿತ್ರಗಳಿಂದ ದೀಪಿಕ ಹೆಚ್ಚು ಜನಪ್ರಿಯಳಾಗಿದ್ದಾಳೆ.ಈ ಬಾರಿ ಅಮೀರ್ ಖಾನ್ ಜೊತೆ ಸ್ಪರ್ಧೆಗೆ ನಿಂತಿದ್ದಾಳೆ. 2013 ಬಾಕ್ಸಾಫೀಸ್ ಕ್ವೀನ್ ಆಗಿದ್ದಾಳೆ. ಅಮೀರ್ ಖಾನ್ , ದೀಪಿಕ ಪಡುಕೋಣೆ ಸಮಾನವಾಗಿ ಒಂದೇ ಸ್ಥಾನದಲ್ಲಿ ನಿಂತಿರುವುದರಿಂದ ಅವರಿಬ್ಬರಿಗೂ ಮೊದಲ ಸ್ಥಾನ ನೀಡಿದೆ ಸರ್ವೇ. ನಾಲ್ಕು ವರ್ಷದ ಬಳಿಕ ತನ್ನ ಸ್ಥಾನವನ್ನು ದೀಪಿಕಾ ಜೊತೆ ಅಮೀರ್ ಹಂಚಿಕೊಲ್ಲುವಂತಾಗಿದೆ. ಇದರಿಂದ ದೀಪಿಕ ಪಡುಕೋಣೆ ಅಂತಾರಾಷ್ಟ್ರೀಯ ಬ್ರಾಂಡ್ ಮಾರುಕಟ್ಟೆಯಲ್ಲಿ ಯು ಮಿಂಚುವ ಸಾಧ್ಯತೆಗಳು ಹೆಚ್ಚಾಗಿವೆ .