ಅಮೀರ್ ಖಾನ್ ಜೊತೆ ತಾನು ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಬಾಲಿವುಡ್ ಡೈಮಂಡ್ ಲೆಗ್ ನಟಿ ದೀಪಿಕಾ ಪಡುಕೋಣೆ. ಫರ್ಹಾನ್ ಅಕ್ತರ್, ರಿತೇಶ್ ಸಿದ್ವಾನಿ ಅವರ ನೇತೃತ್ವದ ಎಕ್ಸೆಲ್ ಎಂಟರ್ಟೈನ್ ಮೆಂಟ್ ನಿರ್ಮಿಸುತ್ತಿರುವ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ
ಈಗ ಬಿಟೌನ್ ನಲ್ಲಿ ವ್ಯಾಪಿಸಿದೆ.ಅದಕ್ಕೆ ಸಂಬಂಧಪಟ್ಟಂತೆ ಮಾತನಾಡುತ್ತಾ ಅಂತಹದ್ದೇನೂ ಇಲ್ಲ ಎನ್ನುವ ಸಂಗತಿ ಸ್ಪಷ್ಟ ಪಡಿಸಿದ್ದಾರೆ .ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಈ ಚೆಲುವೆ ಬಳಿ ಪತ್ರಕರ್ತ ರು ಕೇಳಿದ ಪ್ರಶ್ನೆಗೆ ಉತ್ತರ ಹೇಳಿದರು.
ಈಗಾಗಲೇ ತಾನು ಅಕ್ಷಯ್ ಕುಮಾರ್ , ಶಾರೂಖ್ ಖಾನ್, ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಜೊತೆ ನಟಿಸಿದ್ದೇನೆ, ಅಮೀರ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಶನ್ ಜೊತೆ ನಟಿಸುವ ಅವಕಾಶ ದೊರೆತರೆ ಅದನ್ನು ಬಿಡುವುದಿಲ್ಲ ಎಂದು ಹೇಳಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.ಸದ್ಯಕ್ಕೆ ಅವರು ಶಾರೂಖ್ ಜೊತೆಯಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅದೇ ರೀತಿ ರಣಬೀರ್ ಕಪೂರ್ ಜೋಡಿಯಾಗಿ ಇಂತಿಯಾಜ್ ಅಲಿ ಅವರ ಸಿನಿಮಾದಲ್ಲಿ ಜೂನ್ ನಿಂದ ನಟಿಸುತ್ತಾರೆ. ಆಕೆ ಹೊಮಿ ಅಡ್ಜನಿಯಾ ಜೊತೆ ನಟಿಸಿರುವ ಫೈಂಡಿಂಗ್ ಫನ್ನಿ ಫರ್ನಾಂಡೀಸ್ ಚಿತ್ರವು ಜುಲೈನಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ತನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ ದೀಪಿಕಾ. ಪಂಕಜ್ ಕಪೂರ್, ಡಿಂಪಲ್ ಕಪಾಡಿಯಾ, ನಾಸಿರುದ್ದೀನ್ ಶಾ, ಅವರ ಜೊತೆ ಸಹ ನಟಿಸಲು ಇಷ್ಟ ಎಂದಿದ್ದಾರೆ ಡಿಂಪಲ್ ದೀಪಿಕಾ.