ಅಮೀರ್ ಖಾನ್ ಸೋದರ ತಂದೆಯ ವಶಕ್ಕೆ

ಬುಧವಾರ, 31 ಅಕ್ಟೋಬರ್ 2007 (18:36 IST)
ಅಮೀರ್ ಖಾನ್ ಅವರ ಸೋದರನ ಕಸ್ಟಡಿ ಪ್ರಕರಣದ ಹೊಸ ಬೆಳವಣಿಗೆಯಲ್ಲಿ ಅಮೀರ್ ಖಾನ್ ತಂದೆ ತಾಹಿರ್ ಹುಸೇನ್ ಅವರ ಕಸ್ಟಡಿಗೆ ಫೈಸಾಲ್‌ನನ್ನು ಒಪ್ಪಿಸುವಂತೆ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ. ಈ ಕಸ್ಟಡಿಯು ಒಂದು ತಿಂಗಳ ಕಾಲಾವಧಿವರೆಗೆ ಇರುತ್ತದೆ ಎಂದೂ ಕೋರ್ಟ್ ತಿಳಿಸಿದೆ.

ಫೈಸಾಲ್‌ಗೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿರುವ ಕೋರ್ಟ್ ಖಾರ್ ಪೊಲೀಸ್ ಠಾಣೆಯಲ್ಲಿ ಎರಡು ದಿನಕ್ಕೊಮ್ಮೆ ಹಾಜರಾಗುವಂತೆ ಆದೇಶಿಸಿದ್ದಾರೆ. ಇದಕ್ಕೆ ಮುನ್ನ, ಫೈಸಾಲ್ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರ ಎದುರು ಹಾಜರಾಗಿ ವೈದ್ಯರ ಧೋರಣೆ ವಿರುದ್ಧ ಹರಿಹಾಯ್ದಿದ್ದ.

ಕೋರ್ಟ್‌ಗೆ ವೈದ್ಯರು ಗೊಂದಲ ಉಂಟುಮಾಡುತ್ತಿದ್ದಾರೆಂದು ಟೀಕಿಸಿದ ಅವನು ತನ್ನ ವಿರುದ್ಧ ಪಕ್ಷಪಾತ ಮಾಡುತ್ತಿದ್ದಾರೆಂದು ದೂರಿದ್ದ. ಖಾರ್ ಪೊಲೀಸರು ವೈದ್ಯಕೀಯ ವರದಿಯೊಂದಿಗೆ ಫೈಸಾಲ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ಫೈಸಾಲ್ ಖಾನ್ ಉನ್ಮಾದತೆಯಿಂದ ಬಳಲುತ್ತಿದ್ದಾರೆಂದು ವೈದ್ಯಕೀಯ ವರದಿ ಸ್ಪಷ್ಟವಾಗಿ ತಿಳಿಸಿತ್ತು,. ಆದರೆ ಅಮೀರ್ ಖಾನ್ ಸೋದರ ಮಾತ್ರ ತನಗೇನೂ ಆಗಿಲ್ಲ.

ತಾನು ಸರಿಯಾಗಿಯೇ ಇದ್ದೇನೆ ಎಂದು ಪ್ರತಿಪಾದಿಸುತ್ತಲೇ ಇದ್ದಾನೆ. ನಾನು ಅಪಾಯಕಾರಿಯಾಗಿದ್ದರೆ ಆಸ್ಪತ್ರೆಯಿಂದ ಹೊರಗೆ ಬಿಟ್ಟಿದ್ದೇಕೆ ಎಂದು ಅವರು ಕೋರ್ಟ್‌ಗೆ ಮರುಪ್ರಶ್ನೆ ಹಾಕಿದ್ದಾನೆ. ವೈದ್ಯರು ನನ್ನ ವಿರುದ್ಧ ಪಕ್ಷಪಾತ ತೋರಿಸುತ್ತಿದ್ದಾರೆ. ಆದರೆ ವೈದ್ಯರನ್ನು ಭೇಟಿ ಮಾಡಲು ನನ್ನ ತಂದೆಗೆ ಅವಕಾಶವೇ ಸಿಗುತ್ತಿಲ್ಲ ಎಂದು ಅವನು ದೂರಿದ್ದಾನೆ.

ಫೈಸಾಲ್ ತಮ್ಮ ಸೋದರ ಅಮೀರ್ ಜತೆ ಅಥವಾ ತಾಯಿ ಜೀನತ್ ಜತೆ ಹೋಗಲು ನಿರಾಕರಿಸಿದ್ದಾನೆ. ಅಮೀರ್ ತನ್ನನ್ನು ಮನೆಯಲ್ಲಿ ಗೃಹಬಂಧನದಲ್ಲಿರಿಸಿದ್ದಾನೆ ಮತ್ತು ಉನ್ಮಾದತೆಗೆ ಔಷಧಿ ತೆಗೆದುಕೊಳ್ಳುವಂತೆ ತನಗೆ ಬಲವಂತ ಮಾಡುತ್ತಿದ್ದಾನೆಂದು ಫೈಸಾಲ್ ಆರೋಪಿಸಿದ್ದಾನೆ.

ವೆಬ್ದುನಿಯಾವನ್ನು ಓದಿ