ಆತನ ಮೋಸ ಎಲ್ಲರಿಗು ತಿಳಿಸ್ತೀನಿ ಅಂದಿದ್ದಾಳೆ ಕಾಜಲ್.. ಆತ ಯಾರು ?

ಸೋಮವಾರ, 20 ಜನವರಿ 2014 (12:18 IST)
PR
ಟಾಲಿವುಡ್ ಚಿತ್ರರಂಗದ ಟಾಪ್ ಹೀರೋಯಿನ್ ಕಾಜಲ್ ಅಗರವಾಲ್ ಆ ಬಳಿಕ ತನ್ನ ಗಮನ ಕಾಲಿವುಡ್ ಮತ್ತು ಬಾಲಿವುಡ್ ಕಡೆಗೂ ಹರಿಸಿ ಗೆದ್ದಳು. ಆಕೆ ನಟಿಸಿದ ಬಾಲಿವುಡ್ ಚಿತ್ರಗಳೆರಡು ಒಳ್ಳೆಯ ಫಲಿತಾಂಶ ನೀಡಿತು. ಸಿಂಘಂ ಕೋಟಿಗಳ ಕ್ಲಬ್ ಗೆ ಎಂಟ್ರಿ ಆದರೆ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದ ಚಿತ್ರ ಸ್ಪೆಶಲ್ 26 ಸಹ ಬಾಕ್ಸಾಫೀಸಿನಲ್ಲಿ ಒಳ್ಳೆಯ ಫಲಿತಾಂಶ ಕಂಡಿತು. ಈಗ ಅಜಯ್ ದೇವಗನ್ ನಟನೆಯ ಸಿಂಘಂ 2 ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ.

ಈಗ ಆ ಚಿತ್ರದಲ್ಲಿಯೂ ಕಾಜಲ್ ನಟಿಸಬೇಕು. ಹಿಂದೆ ಈ ಬಗ್ಗೆ ಅಜಯ್ ದೇವಗನ್ ಕಾಜಲ್ ಗೆ ಪ್ರಾಮಿಸ್ ಮಾಡಿದ್ದರಂತೆ ನೀನೆ ನನ್ನ ನೆಕ್ಟ್ ಚಿತ್ರದ ಹಿರೋಯಿನ್ ಅಂತ. ಈ ಚಿತ್ರವೂ 2012 ರಲ್ಲಿ ತನ್ನ ಕೆಲಸ ಮಾಡಬೇಕಿತ್ತು, ಆದರೆ ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಬ್ಯುಸಿ ಆದ ಕಾರಣ ಆ ಚಿತ್ರದ ಕೆಲಸ ಮುಂದೂಡಿತು. ಈಗ ಈ ಚಿತ್ರ ಸೆಟ್ಟೇರುತ್ತಿದೆ. ಅಜಯ್ ಈ ಚಿತ್ರಕ್ಕೆ ಕಾಜಲ್ ಅಗರವಾಲ್ ಆಯ್ಕೆ ಮಾಡಿ ಅಂತ ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಕೇಳಿದಾಗ ಆತ ನೋ ಅಂತ ಹೇಳಿದ್ದಾರಂತೆ. ಇದಕ್ಕೆ ಒಪ್ಪಿಲ್ಲವಂತೆ ರೋಹಿತ್.

ಈ ಬಗ್ಗೆ ಬಿ ಟೌನ್ ನಲ್ಲಿ ಗುಸುಗುಸು ಆರಂಭ ಆಗಿದೆಯಂತೆ. ಆದರೆ ಆ ರೀತಿ ಹೇಳುವಂತೆ ಖುದ್ದು ಅಜಯ್ ದೇವಗನ್ ರೋಹಿತ್ ಗೆ ಹೇಳಿಕೊಟ್ಟಿದ್ದಾರೆ ಎನ್ನುವ ಮಾತು ಬಿ ಟೌನ್ ನಲ್ಲಿ ಸದ್ದಾಗುತ್ತಿದೆಯಂತೆ. ಇದನ್ನು ಕೇಳಿ ಕಾಜಲ್ ಮೈ ಉರಿದು ಹೋಗಿದೆಯಂತೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಜಯ್ ಮಾಡಿದ ಮೋಸ ಜಗತ್ತಿಗೆ ತಿಳಿಸುತ್ತಾಳಂತೆ ಆಕೆ..! ಪಾಪ ಕಾಜಲ್.

ವೆಬ್ದುನಿಯಾವನ್ನು ಓದಿ