ಒಂದು ಚಿತ್ರಕ್ಕೆ ಎರಡು ವರ್ಷ: ಪ್ರಭಾಸ್ ಈ ನಿರ್ಧಾರ ಸರೀಯೇ?

ಬುಧವಾರ, 1 ಜನವರಿ 2014 (17:53 IST)
ಮಾಸ್ ಇಮೇಜ್ ಗೆ ಹೊಂದುವಂತಹ ಚಿತ್ರಗಳಲ್ಲಿ ನಟಿಸಿರುವ ನಟ ಪ್ರಭಾಸ್ . ಡಾರ್ಲಿಂಗ್ , ಮಿಸ್ಟರ್ ಪರ್ಫೆಕ್ಟ್ ನಂತಹ ಕೌಟುಂಬಿಕ ಕಥಾಹಂದರ ಇರುವ ಚಿತ್ರಗಳಲ್ಲಿ ನಟಿಸಿರುವ ನಟ ಪ್ರಭಾಸ್, ಇಂತಹ ಚಿತ್ರಗಳಲ್ಲಿ ನಟಿಸಿ ತನಗೊಂದು ಐಡೆಂಟಿಟಿ ಪಡೆದಿರುವ ನಟ ಪ್ರಭಾಸ್ . ಟಾಲಿವುಡ್ ಟಾಪ್ ಹೀರೋಗಳಲ್ಲಿ ಒಬ್ಬರೆಂಬ ಅಗ್ಗಳಿಕೆ ಹೊಂದಿದ್ದಾರೆ ಪ್ರಭಾಸ್. ಅಷ್ಟೆ ಅಲ್ಲದೇ ಹೆಣ್ಣು ಮಕ್ಕಳ ಕನಸಿನ ಹೀರೋ ಆಗಿಯು ತನ್ನ ಕ್ರೇಜ್ ಬೆಳೆಸಿಕೊಂಡಿದ್ದಾರೆ ಈ ನಟ.ಈಗ ಬಾಬಲಿ ಚಿತ್ರದ ಮುಖಾಂತರ ಹೋರಾಟ ಮಾಡುವ ಯೋಧನ ಪಾತ್ರದಲ್ಲಿ ನಟಿಸಿ ತನ್ನ ಇಮೇಜ್ ಬೇರೆ ರೀತಿಯಲ್ಲಿ ಬೆಳಸಿಕೊಳ್ಳಲು ಹೊರಟಿದ್ದಾರೆ ಈ ಕಲಾವಿದ.

PR
PR
ರಾಜಮೌಳಿ ನಿರ್ದೇಶನದ ಛತ್ರಪತಿಯಲ್ಲಿ ನಟಿಸಿದ್ದ ಪ್ರಭಾಸ್ ಈಗ ಅವರದ್ದೇ ಚಿತ್ರ ಬಾಹುಬಲಿಯಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಅವರು ಎರಡು ವರ್ಷಗಳ ಕಾಲ ಯಾವುದೇ ಕಮಿಟ್ಮೆಂಟ್ ಗೂ ಸಹಿ ಹಾಕಿಲ್ಲ. ಸುಮಾರು ಎರಡು ವರ್ಷಗಳ ಕಾಲ ಒಂದು ಸಿನಿಮಾಕ್ಕೆಂದು ಸಮಯ ವ್ಯಯಿಸುವುದು ಹುಚ್ಚುತನ ಎನ್ನುವುದು ಟಾಲಿವುಡ್ ಮಂದಿಯ ಮನದಾಳದ ಮಾತುಗಳು. ಇದೊಂದೆ ಚಿತ್ರಕ್ಕಾಗಿ ತನ್ನ ಸಮಯ ಮೀಸಲಿಟ್ಟಿರುವುದಕ್ಕೆ ಆ ಚಿತ್ರಕ್ಕೆ ಪ್ರಭಾಸ್ ಗೆ ನೀಡಿರುವ ಭಾರಿ ಮೊತ್ತ ಒಂದು ಕಾರಣವಾದರೆ ಈ ಸಿನಿಮಾವನ್ನು ಎರಡು ಭಾಗವನ್ನಾಗಿ ಮಾಡಿ ನಿರ್ಮಿಸುತ್ತಿರುವುದು ಮತ್ತೊಂದು ಕಾರಣವಾಗಿದೆ.

ಆದರೆ ಎರಡು ವರ್ಷದಲ್ಲಿ ಈತನ ಸಮಕಾಲೀನ ನಟರ ಎರಡು ಇಲ್ಲವೇ ಮೂರು ಚಿತ್ರಗಳ ಬಿಡುಗಡೆ ಆಗುತ್ತದೆ. ಅಂತಹುದರಲ್ಲಿ ಒಂದು ಚಿತ್ರಕ್ಕಾಗಿ ಇಷ್ಟೆಲ್ಲಾ ಸಮಯ ವ್ಯಯ ಮಾಡುತ್ತಿರುವುದಕ್ಕೆ ಟಾಲಿವುಡ್ ಮಂದಿ ಪ್ರಭಾಸ್ ನಿರ್ಧಾರ ಸರಿಯಿಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. ನೋಡುವ ಯಾವುದು ಸರಿ ಅಂತ ಕಾಲವೇ ಹೇಳುತ್ತದೆ.!

ವೆಬ್ದುನಿಯಾವನ್ನು ಓದಿ