ಕತ್ರಿನಾ ಅರೇಬಿಕ್ ಕಲಿತದ್ದು ಯಾಕೆಂದ್ರೆ..!

ಮಂಗಳವಾರ, 4 ಫೆಬ್ರವರಿ 2014 (11:02 IST)
PR
PR
ಬಾಲಿವುಡ್ ನಲ್ಲಿ ಕತ್ರಿನ ಬಾರ್ಬಿ ಬೊಂಬೆ ರೀತಿ ನೋಡೋಕೆ ಮುದ್ದಾಗಿದ್ದಾಳೆ. ಆಕೆಯ ರೂಪವನ್ನು ಕಂಡು ಅವಳ ಅಭಿಮಾನಿಗಳಾಗಿದ್ದಾರೆ ಅನೇಕ ಮಂದಿ. ಆದರೆ ನಟನೆಯ ವಿಷಯಕ್ಕೆ ಬಂದರೆ ಆಕೆಯದ್ದು ಆವರೇಜ್. ಅದನ್ನು ನೇರವಾಗಿ ಆಕೆಯ ಮನ ನೋಯಿಸಿದವರು ಸಹ ಹೇರಳವಾಗಿ ಇದ್ದಾರೆ ಎಂದೇ ಹೇಳ ಬಹುದು. ಆ ವಿಷಯದಿಂದ ಬೇಸರ ಪಟ್ಟ ಕತ್ರಿನಾ ತಾನು ಇನ್ನು ಹೀಗೆ ಇದ್ದರೆ ತೊಂದರೆ ತನಗೆ ಎಂದು ತಿಳಿದು ನಟನೆಗೆ ಸಂಬಂಧ ಪಟ್ಟಂತೆ ಅನೇಕ ಬಗೆಯ ಕಸರತ್ತುಗಳನ್ನು ಮಾಡಿದ್ದಾಳೆ. ಅಲ್ಲದೆ ಪೂರಕ ಸಾಹಸಗಳ ಕಡೆಗೂ ತನ್ನ ಗಮನ ನೆಟ್ಟಿದ್ದಾಳೆ ಆಕೆ. ಇದರ ಪರಿಣಾಮ ಆಕೆಯ ಬಗ್ಗೆ ಇರುವ ಆ ಕೆಟ್ಟ ಹೆಸರು ದೂರವಾಗಿದೆ ಎಂದೇ ಹೇಳಬಹುದಾಗಿದೆ.

ತನ್ನ ಬಗ್ಗೆ ಇರುವ ಅಪವಾದ ದೂರ ಮಾಡಿಕೊಳ್ಳಲು ಆಕೆ ಮಾಡಿದ್ದೇನು ಗೊತ್ತೆ? ಜಿಂದಗಿ ನಾ ಮಿಲೆಗಿ ದುಬಾರ ಅನ್ನುವ ಚಿತ್ರಕ್ಕಾಗಿ ಬೈಕ್ ನಡೆಸುವುದನ್ನು ಆಕೆ ಕಲಿತರು. ಅಷ್ಟೇ ಅಲ್ಲದೆ ಅದನ್ನು ಆರಾಮವಾಗಿ ನಡೆಸಿ ಎಲ್ಲರ ಬಳಿ ಭೇಷ್ ಎಂದು ಅನ್ನಿಸಿಕೊಂಡಳು . ಅಲ್ಲದೆ ಮೇರಿ ಬ್ರದರ್ ಕಿ ದುಲ್ಹನ್ ಅನ್ನುವ ಚಿತ್ರಕ್ಕಾಗಿ ಆಕೆ ಗಿಟಾರ್ ಕಲಿತಳು. ಅಷ್ಟೇ ಅಲ್ಲದೆ ಧೂಮ್-3 ಚಿತ್ರಕ್ಕಾಗಿ ಸರ್ಕಸ್ ಫಿಟ್ಸ್ ಸಹ ಕಲಿತಳುಅದೇ ಚಿತ್ರಕ್ಕೆಂದು ಫೈಟ್ಸ್ ಬಗ್ಗೆ ಸಹ ಆಕೆ ಶಿಕ್ಷಣ ಪಡೆದಿದ್ದಾಳೆ. ಹೀಗೆ ಪಾತ್ರವು ಎಂತಹದ್ದನ್ ಬಯಸುತ್ತದೆಯೋ ಅದನ್ನು ನೀಡಲು ಆಕೆ ಸಿದ್ಧವಾಗಿದ್ದಾಳೆ.

ಈಗ ಚಿತ್ರ ಒಂದಕ್ಕಾಗಿ ಆಕೆ ಅರೇಬಿಕ್ ಭಾಷೆಯ ಕಲಿಕೆ ಮಾಡುತ್ತಿದ್ದಾರೆ. ಅದರಲ್ಲಿ ಆ ಪಾತ್ರ ಅಲ್ಪಸ್ವಲ್ಪ ಅರೇಬಿಕ್ ಭಾಷೆಯನ್ನೂ ಮಾತಾಡುತ್ತದೆ. ಹೀಗೆ ತನ್ನೆಲ್ಲ ಶ್ರಮವನ್ನು ಪಾತ್ರದ ಜೀವಂತಿಕೆಗಾಗಿ ಮೀಸಲಿಡುತ್ತಿರುವ ಕತ್ರಿನಾ ಹಿಡಿದ ಕೆಲಸ ಬಿಡದ ಹೆಣ್ಣು ಎನ್ನುವ ಹೆಸರಿಗೆ ಭಾಜನಳಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ