ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್
ಹೊಂಬಾಳೆ ಫಿಲ್ಮ್ಸ್ ಜತೆ ಪ್ರಭಾಸ್ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ʼಸಲಾರ್ʼ ಚಿತ್ರವನ್ನು ಹೊಂಬಾಳೆ ನಿರ್ಮಾಣ ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ʼಸಲಾರ್ʼ ದೊಡ್ಡ ಹಿಟ್ ಆಗಿತ್ತು. ಈ ಹಿನ್ನೆಲೆಯಲ್ಲಿ 2024ರಲ್ಲಿ ಪ್ರಭಾಸ್ ಜತೆ ಮೂರು ಸಿನಿಮಾಗಳನ್ನು ಮಾಡುವುದರ ಬಗ್ಗೆ ಹೊಂಬಾಳೆ ಒಪ್ಪಂದ ಮಾಡಿಕೊಂಡಿತು.
ಹೊಂಬಾಳೆ ಬಿಗ್ ಬಜೆಟ್‌ಗಳ ಸಿನಿಮಾದ ನಿರ್ಮಾಣದ ಕೈಹಾಕಿದೆ. ಬಾಲಿವುಡ್‌ಗೂ ಕಾಲಿಟ್ಟಿದೆ. ತಮಿಳು, ಮಲಯಾಳಂನಲ್ಲೂ ಬಂಡವಾಳ ಹಾಕಿ ಗೆದ್ದಿದೆ.