ಕನ್ನಡ ಪವರ್ ಸ್ಟಾರ್ ಪುನೀತ್ ಅವರು ತೆಲುಗು ದೂಕುದು ಚಿತ್ರದ ರೀಮೇಕ್ ನಲ್ಲಿ ನಟಿಸುತ್ತಿರುವ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಆ ಚಿತ್ರದಲ್ಲಿ ಕಾಲಿವುಡ್ ಮತ್ತು ಟಾಲಿವುಡ್ ನಟಿ ತ್ರಿಶ ಪುನೀತ್ ಜೊತೆಯಾಗಿದ್ದಾಳೆ. ಈಗ ಅಪ್ಪು ಜೊತೆ ಡ್ಯುಯೆಟ್ ಹಾಡಲು ಮತ್ತೊಬ್ಬಳು ಬರ್ತಿದ್ದಾಳೆ ಅವಳೇ ಕಾಜಲ್ ಅಗರ ವಾಲ್. ಕಾಲಿವುಡ್ ಮತ್ತು ಟಾಲಿವುಡ್ ಅಲ್ಲದೆ ಬಾಲಿವುಡ್ ನಲ್ಲಿಯೂ ಯಶಸ್ವಿ ಆಗಿರುವ ಈ ಚೆಲುವೆ ಅಪ್ಪು ನಟನೆಯ ಹೊಸ ಚಿತ್ರದಲ್ಲಿ ನಟಿಸಲು ಸಿದ್ಧವಾಗುತ್ತಿದ್ದಾಳೆ.
ಅಣ್ಣ ಬಾಂಡ್ ಚಿತ್ರವನ್ನು ನಿರ್ದೇಶಿಸಿದ್ದ ಸೂರಿ ಮತ್ತು ಗೂಗ್ಲಿಯ ಪವನ್ ವಡೆಯರ್ ಪ್ರಾಜೆಕ್ಟ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಈ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ . ಕಾಜಲ್ ನ್ನು ಪವನ್ ಕರೆತರುತ್ತಾರೊ ಅಥವಾ ಸೂರಿಯೋ ಗೊತ್ತಿಲ್ಲ.. ಯಾಕೆ ಅಂದರೆ ಈ ಕಿರಿಕ್ ನಟಿಯು ರೀಮೇಕ್ ಚಿತ್ರಕ್ಕಿಂತ ಸ್ವಮೇಕ್ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡುತ್ತಾರಂತೆ. ಯಾವು ಸ್ವಮೇಕ್ ಮಾಡ್ತಾರೋ ಅವರಿಗೆ ಈ ಚೆಲುವೆಯ ಚಿತ್ರವನ್ನು ನಿರ್ದೇಶಿಸುವ ಸದವಕಾಶ. ಆದರೇ ಇಬ್ಬರೂ ತಾವು ಸ್ವಮೇಕ್ ಮಾಡ್ತಾ ಇರೋದು ಅಂತಿದ್ದಾರೆ !