ಕಾಮೆಡಿ ಚಿತ್ರಕ್ಕೆ ಬಫೂನ್ ರೀತಿ ಕಾಣಬೇಕಿಲ್ಲ

ಸೋಮವಾರ, 24 ಸೆಪ್ಟಂಬರ್ 2007 (19:04 IST)
IFM
ಕಾಮೆಡಿ ಚಿತ್ರಗಳ ತಯಾರಿಕೆಗೆ ನೀವು ಬಫೂನ್ ರೀತಿ ಕಾಣಬೇಕಿಲ್ಲ ಎಂದು ಕಾಮೆಡಿ ಚಿತ್ರಗಳ ವಿಶಿಷ್ಟ ಬ್ರಾಂಡನ್ನು ದಕ್ಷಿಣ ಭಾರತದ ಸಾಂಬಾರ್ ಸ್ವಾದದೊಂದಿಗೆ ತಯಾರಿಸಿದ ನಿರ್ದೇಶಕ ಪ್ರಿಯದರ್ಶನ್ ಹೇಳುತ್ತಾರೆ.

ಗಂಭೀರ ಮುಖವದನರಾದ ನೀವು ಕಾಮೆಡಿ ಚಿತ್ರಗಳನ್ನು ಹೇಗೆ ಮಾಡುತ್ತೀರಿ ಎಂದು ಕೇಳಿದಾಗ ಅವರು ನಗುತ್ತಾ ಹೇಳುತ್ತಾರೆ.ಕಾಮೆಡಿ ಚಿತ್ರಗಳನ್ನು ಮಾಡಲು ಬಫೂನ್ ರೀತಿಯಲ್ಲಿ ಕಾಣಬೇಕಿಲ್ಲ. ನಾನು ಚಿತ್ರಗಳಲ್ಲಿ ಹಾಸ್ಯ ದೃಶ್ಯವನ್ನು ಆನಂದಿಸುತ್ತೇನೆ.

ಚಾರ್ಲಿ ಚಾಪ್ಲಿನ್, ಲಾರೆಸ್ ಹಾರ್ಡಿ ಮತ್ತು ಮಿಕ್ಕಿ ಮೌಸ್‌ನಿಂದ ನನಗೆ ಹಾಸ್ಯ ಪ್ರವೃತ್ತಿ ಬಂದಿದೆ ಎಂದು ಪ್ರಿಯದರ್ಶನ್ ಹೇಳುತ್ತಾರೆ. ವಿರಾಸತ್. ಗರ್ದಿಶ್ ಮತ್ತು ಸಾಜಾ ಎ ಕಾಲಾ ಪಾನಿ ಬಳಿಕ ಎರಡು ಚಿತ್ರಗಳನ್ನು ತಯಾರಿಸಿ ಕೈಸುಟ್ಟುಕೊಂಡೆ. ಆಗ ನನಗೆ ಉಳಿದಿದ್ದು ಎರಡೇ ದಾರಿ. ಬಾಲಿವುಡ್‌ನಲ್ಲಿ ಉಳಿಯುವುದು ಅಥವಾ ಓಡಿಹೋಗುವುದು.

ದಕ್ಷಿಣ ಭಾರತದಲ್ಲಿ ಕಾಮೆಡಿ ಚಿತ್ರಗಳು ಯಶಸ್ವಿಯಾಗಿದ್ದನ್ನು ಅರಿತಿದ್ದೆ. ಹಿಂದಿ ಚಿತ್ರಗಳಲ್ಲಿ ಹಾಸ್ಯ ಪ್ರವೃತ್ತಿಯ ಕೊರತೆಯಿದೆ ಎಂದನಿಸಿತು. ಆದ್ದರಿಂದ ಹೀರಾ ಪೇರಿ ಚಿತ್ರವನ್ನು ಆರಂಭಿಸಿದೆ. ಅದೊಂದು ಟ್ರೆಂಡ್ ಆಗಿ ಮುಂದುವರಿದು ಇಂದು ಎಲ್ಲರೂ ಕಾಮೆಡಿ ಚಿತ್ರಕ್ಕೆ ಇಳಿದಿದ್ದಾರೆ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ