ಕುಡಿದ ಅಮಲಿನಲ್ಲಿದ್ದ ರೌಡಿಗಳಿಂದ ಪೂನಂ ಪಾಂಡೆ ತಪ್ಪಿಸಿಕೊಂಡಿದ್ದು ಹೇಗೆ, ಕೆಳಗಿದೆ ಓದಿ

ಶನಿವಾರ, 5 ಏಪ್ರಿಲ್ 2014 (13:43 IST)
ಮುಂಬೈ: ನಾಶಾ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿರುವ ಪೂನಂ ಪಾಂಡೆ ಬೆಂಗಳೂರಿನ ಐಷಾರಾಮಿ ಕ್ಲಬ್‌ವೊಂದರಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಸಂಭವಿಸಿದ ದುಃಸ್ವಪ್ನದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಬ್ಬಾ, ತಾವಿನ್ನು ಹೊಸ ವರ್ಷದ ಸಮಾರಂಭದಲ್ಲಿ ಜೀವಮಾನದಲ್ಲಿ ಪ್ರದರ್ಶನ ನೀಡೋಲ್ಲ. ಇದೊಂದು ಅಪಾಯಕಾರಿ ಘಟನೆ ಎಂದು ಹೇಳಿದರು.ನಂತರ ಅವರು ಈ ಘಟನೆಯ ವಿವರಗಳನ್ನು ಬಿಚ್ಚಿಟ್ಟರು. 'ನನಗೆ ಪ್ರದರ್ಶನಕ್ಕೆ ದೊಡ್ಡ ಪ್ರಮಾಣದ ಹಣದ ಆಮಿಷ ಒಡ್ಡಲಾಯಿತು.

ಆದರೆ ಹೊಸ ವರ್ಷದ ಸಂಜೆ ಕರಾಳ ಸಂಜೆಯಾಗುತ್ತದೆಂದು ಯಾರು ಎಣಿಸಿದ್ದರು?ತಮ್ಮ ಪ್ರದರ್ಶನದ 10 ನಿಮಿಷದಲ್ಲೇ, ಪುರುಷರ ಗುಂಪು ಕ್ಲಬ್‌ನಲ್ಲಿ ತಮ್ಮ ಮೇಲಿನ ನಿಯಂತ್ರಣವನ್ನು ಸಂಪೂರ್ಣ ಕಳೆದುಕೊಂಡಿದ್ದರು. ಎಲ್ಲರೂ ಗಂಟಲು ಮಟ್ಟಕ್ಕೆ ಕುಡಿದಿದ್ದರು. ನನ್ನ ಬಳಿ 15-20 ಬೌನ್ಸರುಗಳಿದ್ದರು ಮತ್ತು ಸಂಘಟಕರು ಸುಮಾರು 100 ಗಾರ್ಡ್‌ಗಳನ್ನು ಒದಗಿಸಿದ್ದರು.

PR
PR
ಆದರೆ ಅದು ಸಾಕಾಗಲಿಲ್ಲ.ನನ್ನ ಪ್ರದರ್ಶನ ಮುಗಿಯುತ್ತಿದ್ದಂತೆ, ರೌಡಿ ದುಷ್ಕರ್ಮಿಗಳು ತಡೆಗೋಡೆಯನ್ನು ಮುರಿದು ವೇದಿಕೆ ಮೇಲೆ ಬರಲು ನುಗ್ಗಿದರು. ಬೌನ್ಸರುಗಳಿಗೆ ಮತ್ತು ಅಂಗರಕ್ಷಕರಿಗೆ ಕೂಡ ಕುಡಿದ ಮತ್ತಿನಲ್ಲಿದ್ದ ಗುಂಪಿನಿಂದ ನನ್ನನ್ನು ರಕ್ಷಿಸುವುದು ಸಾಧ್ಯವಿಲ್ಲವೆಂದು ಅರಿವಾಯಿತು.ವೇದಿಕೆ ಮೇಲೆ ಏರಿದ ಪುರುಷರಿಗೆ ನನ್ನ ದೇಹದ ಉಬ್ಬು ತಗ್ಗುಗಳ ಮೇಲೆ ಹೆಚ್ಚಿನ ಗಮನವಿತ್ತು. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಪೂನಂಗೆ ಒಂದೇ ದಾರಿ ಉಳಿದಿತ್ತು. ಅದು ಪಲಾಯನ ಮಾಡುವುದು. ನಾನು ಜೀವನದಲ್ಲಿ ಅಷ್ಟೊಂದು ವೇಗವಾಗಿ ಯಾವತ್ತೂ ಓಡಿಲ್ಲ.

ಮಿಲ್ಕಾ ಸಿಂಗ್ ಇದ್ದಿದ್ದರೆ ಬಹುಶಃ ನಾನು ಅವರಿಗೆ ಸ್ಪರ್ಧೆ ನೀಡುತ್ತಿದ್ದೆ ಎನಿಸಿತು. ನನ್ನ ಕೋಣೆಯಿರುವ ಮಹಡಿಗೆ ವೇಗವಾಗಿ ತಲುಪಿದೆ. ಆದರೆ ಗುಂಪು ನನ್ನ ಕೋಣೆಗೆ ಅಟ್ಟಿಸಿಕೊಂಡು ಬಂದರು. ಅಂಗರಕ್ಷಕರು ಮತ್ತು ಬೌನ್ಸರುಗಳು ಅವರನ್ನು ಹಿಂಬಾಲಿಸಿದರು. ನನ್ನ ಜೀವನದಲ್ಲಿ ಅಷ್ಟೊಂದು ನಾನು ಯಾವತ್ತೂ ಹೆದರಿಕೊಂಡಿರಲಿಲ್ಲ.ಎಷ್ಟೇ ಹಣ ಕೊಟ್ಟರೂ ಜೀವಕ್ಕಿಂತ ಅದರ ಬೆಲೆ ಹೆಚ್ಚಲ್ಲ ಎಂದು ಪೂನಂ ಪಾಂಡೆ ಹೇಳಿದರು.

ವೆಬ್ದುನಿಯಾವನ್ನು ಓದಿ