ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

Krishnaveni K

ಶುಕ್ರವಾರ, 4 ಜುಲೈ 2025 (14:01 IST)
Photo Credit: Instagram
ಬೆಂಗಳೂರು: ಸ್ಯಾಂಡಲ್ ವುಡ್ ನ  ಖ್ಯಾತ ನಟಿ ಭಾವನಾ ರಾಮಣ್ಣ ಐವಿಎಫ್ ತಂತ್ರಜ್ಞಾನದ ಮೂಲಕ ಮಗು ಪಡೆಯುತ್ತಿದ್ದಾರೆ. ಈ ಮೂಲಕ ಸಿಂಗಲ್ ಪೇರೆಂಟ್ ಆಗಲು ಹೊರಟಿದ್ದಾರೆ.

ಭಾರತದಲ್ಲಿ ಒಂಟಿ ಮಹಿಳೆಯರು ಆಧುನಿಕ ತಂತ್ರಜ್ಞಾನದ ಮೂಲಕ ಮಗು ಪಡೆದಿರುವುದು ತೀರಾ ವಿರಳ. ಈಗ ನಟಿ ಭಾವನಾ ತಮ್ಮ 40 ರ ಹರೆಯದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಖುದ್ದಾಗಿ ಅವರೇ ಮುಕ್ತವಾಗಿ ಮಾತನಾಡಿದ್ದಾರೆ.

ಅಂದ ಹಾಗೆ ಭಾವನಾ ಇದುವರೆಗೆ ಮದುವೆಯಾಗಿಲ್ಲ. ಮದುವೆ ಬಗ್ಗೆ ಅವರಿಗೆ ಆಸಕ್ತಿ ಇದ್ದಂತೆಯೇ ಇಲ್ಲ. ಆದರೆ ಈಗ ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳ ತಾಯಿಯಾಗಲು ಹೊರಟಿದ್ದಾರೆ. ಈ ವರ್ಷದ ಕೊನೆಯಲ್ಲಿ ಡೆಲಿವರಿಯಾಗಲಿದೆಯಂತೆ.

ನಾನು ಮಕ್ಕಳ ಸುತ್ತ ಬೆಳೆದವಳು. 30 ನೆಯ ವಯಸ್ಸಿನಲ್ಲಿ ತಾಯಿಯಾಗುವ ಆಕಾಂಕ್ಷೆಯಿದ್ದರೂ ಮಗು ಮಾಡಿಕೊಳ್ಳುವ ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ ಈಗ ಮಗು ಮಾಡಿಕೊಳ್ಳಬೇಕೆನಿಸಿತು ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಕ್ಕಳಿಗೆ ತಂದೆಯಿಲ್ಲದೇ ಹೋದರೂ ದಯಾಳು ಪುರುಷರ ಮಧ್ಯೆ ಅವರು ಬದುಕುತ್ತಾರೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ