ಚಕ್ ದೆ ಇಂಡಿಯ ಅತ್ಯುತ್ತಮ ಚಲನಚಿತ್ರ

ಶುಕ್ರವಾರ, 19 ಅಕ್ಟೋಬರ್ 2007 (19:55 IST)
ಆಸ್ಟ್ರೇಲಿಯನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಶಿಮಿತ್ ಅಮಿನ್ ಅವರ ಚಕ್ ದೆ ಇಂಡಿಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ ಮತ್ತು ಗಾಂಧಿ ಮೈ ಫಾದರ್ ಚಿತ್ರದಲ್ಲಿ ಸೂಕ್ಷ್ಮ ಪಾತ್ರಾಭಿನಯ ಮಾಡಿದ ಅಕ್ಷಯ್ ಖನ್ನಾ ಅತ್ಯುತ್ತಮ ಸಾಧನೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಆಸ್ಟೇಲಿಯದಲ್ಲಿ ಚಿತ್ರೀಕರಣವಾದ ಚಕ್ ದೆ ಇಂಡಿಯ 90 ಆಸ್ಟ್ರೇಲಿಯ ಹಾಕಿ ಆಟಗಾರರು ಮತ್ತು 9000 ಆಸ್ಟ್ರೇಲಿಯ ಪೋಷಕನಟರನ್ನು ಹಾಕಿಕೊಂಡು ಚಿತ್ರೀಕರಣ ಮಾಡಿದೆ.
ಗಾಂಧಿ ಮೈ ಫಾದರ್ ಚಿತ್ರದಲ್ಲಿ ಅಕ್ಷಯ್ ಅವರ ಗಾಂಧಿಯ ಪುತ್ರ ಹರಿಲಾಲ್‌ನ ಪಾತ್ರವು ಟೋಕಿಯೊ ಚಲನಚಿತ್ರೋತ್ಸವದಲ್ಲಿ ಸ್ಥಾನ ಪಡೆದಿತ್ತು.

ಪ್ರಶಸ್ತಿ ಸಮಾರಂಭವು ಸಮಕಾಲೀನ ಕಲೆ ಮ್ಯೂಸಿಯಂನಲ್ಲಿ ನಡೆಯಿತು ಮತ್ತು ಚಕ್ ದೆ ಇಂಡಿಯದ ಶಿಮ್ಮಿತ್ ಅಮಿನ್, ಸಾಗರಿಕ ಘಾಟ್ಗೆ ಮತ್ತು ತನ್ಯಾ ಅಬ್ರಾಲ್ ಭಾಗವಹಿಸಿದ್ದರು. ಗಾಂಧಿ ಮೈ ಫಾದರ್‌ ತಂಡದ ನಿರ್ದೇಶಕ ಫಿರೋಜ್ ಖಾನ್ ಮತ್ತು ಅಕ್ಷಯ್ ಖನ್ನಾ ಕೂಡ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ