ಚಿರಂಜೀವಿ ಸ್ಟಾಲಿನ್ ಗುಟ್ಟು ಸಲ್ಮಾನ್ ಖಾನ್ ಜೈ ಹೋ ನಿಂದ ರಟ್ಟು

ಶುಕ್ರವಾರ, 20 ಡಿಸೆಂಬರ್ 2013 (11:22 IST)
PR
ಚಿರಂಜೀವಿ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ನಟಿಸಿದ ಚಿತ್ರ ಸ್ಟಾಲಿನ್. ಮೆಗಾಸ್ಟಾರ್ ನಟನೆಯ ಈ ಚಿತ್ರವನ್ನು ತಮಿಳು ನಿರ್ದೇಶಕ ಸ್ಟಾಲಿನ್ ನಿರ್ದೇಶಿಸಿದ್ದರು. ಆದ್ರೆ ಈ ಚಿತ್ರ ಹೇಳಿಕೊಳ್ಳುವಷ್ಟು ಗೆಲುವು ನೀಡಲಿಲ್ಲ. ಮುಖ್ಯವಾಗಿ ಚಿರಂಜೀವಿ ಅವರ ಅಭಿಮಾನಿಗಳಿಗೆ ಅಷ್ಟೊಂದು ಇಷ್ಟವಾಗಿರಲಿಲ್ಲ .

ಆದರೆ ಗಳಿಕೆಯಲ್ಲಿ ಕೊರತೆ ಆಗಲಿಲ್ಲ್ಲ. ಅದಾದ ಬಳಿಕ ಚಿರಂಜೀವಿ ಒಂದೆರಡು ಚಿತ್ರಗಳಲ್ಲಿ ನಟಿಸಿದರೂ ಅದು ಅಷ್ಟೇನೂ ಯಶಸ್ಸು ನೀಡಲಿಲ್ಲ. ನಂತರ ಅವರ ಗಮನ ರಾಜಕೀಯದತ್ತ ಹೊರಳಿತು.

ಈ ನಟನ ಸ್ಟಾಲಿನ್ ಚಿತ್ರವನ್ನು ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ರೀಮೇಕ್ ಮಾಡಿದ್ದಾರೆ. ಅದು ಜೈ ಹೊ ಹೆಸರಿನಲ್ಲಿ ಸಿದ್ಧವಾಗಿದೆ. ಸಲ್ಮಾನ್ ಖಾನ್ ನಟನೆಯ ಈ ಚಿತ್ರದಲ್ಲಿ ಸಲ್ಲು ಜೊತೆಯಾಗಿದ್ದಾರೆ ತಬು .

ವೆಬ್ದುನಿಯಾವನ್ನು ಓದಿ