ಚೀನೀ ಹುಡುಗಿ ಮ್ಯಾಂ ಮ್ಯಾಂ ದೀಪಿಕಾ

IFM
ಚಿತ್ರರಂಗದಲ್ಲಿನ ಆನೇಕ ಚಿತ್ರನಟರ ಆಯುಸ್ಯವೇ ಸವೆದು ಹೋಗುತ್ತದೆ ಆದರೆ ಅವರಿಗೆ ದ್ವಿಪಾತ್ರದಲ್ಲಿ ನಟಿಸುವ ಅವಕಾಶ ದಕ್ಕುವುದಿಲ್ಲ. ಆದರೆ ದೀಪಿಕಾ ಪಡುಕೋಣೆ ಎಂಬ ಹುಡುಗಿ ಬಾಲಿವುಡ್‌ಗೆ ಕಾಲಿಟ್ಟಿದ್ದೇ ಓಂ ಶಾಂತಿ ಓಂ ಚಿತ್ರದ ದ್ವಿಪಾತ್ರದೊಂದಿಗೆ. ಆಗ ದಿಪ್ಸ್ ಅದೃಷ್ಟ ಕಂಡು ಕರುಬಿದವರೆಷ್ಟೊ ಮಂದಿ. ಈಗ ಮತ್ತೆ ತಮ್ಮ ಮೂರನೇ ಚಿತ್ರ 'ಚಾಂದನಿ ಚೌಕ್ ಟೂ ಚೀನಾ'ದಲ್ಲಿ ದಿಪ್ಸ್‌ಗೆ ದ್ವಿಪಾತ್ರ.

ದೀಪಿಕಾ ದ್ವಿಪಾತ್ರದಲ್ಲಿ ನಟಿಸುತ್ತಿರುವ ಬಗೆಗಿನ ಮಾತುಗಳು ಕೇವಲ ಪಬ್ಲಿಸಿಟಿ ಸ್ಟಂಟ್ ಎಂದು ಹಲವರು ಭಾವಿಸಿದ್ದರು, ಆದರೆ ಈಗ ದೀಪಿಕಾ ಖುದ್ದಾಗಿ ತಾವು 'ಚಾಂದನಿ ಚೌಕ್ ಟೂ ಚೀನಾ' ಚಿತ್ರದಲ್ಲಿ ಅವಳಿ ಭೂಮಿಕೆಯಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

ದೀಪಿಕಾ ಈ ಚಿತ್ರದಲ್ಲಿ ಕೆಲವು ಆಕ್ಷ್ಯನ್ ದೃಶ್ಯಗಳನ್ನೂ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಆರಂಭವಾಗುವುದಕ್ಕೆ ನಾಲ್ಕು ತಿಂಗಳು ಮುಂಚಿತವಾಗಿ ಅವರು ಮಾರ್ಶಲ್ ಆರ್ಟ್ ಕರಗತ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಅಕ್ಷಯ್ ಕುಮಾರ್. ದೀಪಿಕಾ ಇತ್ತೀಚೆಗೆ ಅಕ್ಷಯ್‌ರನ್ನು ಸಿಕ್ಕಾಪಟ್ಟೆ ಹೊಗಳುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

ಚಿತ್ರದ ಕಥೆ ಭಾರತದಿಂದ ಚೀನಾವರೆಗೆ ಸಾಗುವುದರಿಂದ ದೀಪಿಕಾ ಈ ಚಿತ್ರದಲ್ಲಿ ಭಾರತೀಯ ಹಾಗು ಚೀನೀ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರ ಅವಳಿ ಪಾತ್ರಗಳ ಹೆಸರು ಸುಖಿ ಮತ್ತು ಮ್ಯಾಂ ಮ್ಯಾಂ ಎಂದಾಗಿದೆ.

ಸುಖಿಯೇನೊ ಸರಿ ಆದರೆ ಚೀನೀ ಹೆಸರು ಬೆಕ್ಕು ಕೂಗಿದಂತಿದೆಯಲ್ಲಾ...

IFM

ವೆಬ್ದುನಿಯಾವನ್ನು ಓದಿ