ಜಲ್ಸಾದಿಂದ ಹೊರನಡೆಯಲಿರುವ ಅಭಿ-ಐಶ್

IFM
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದುಬೈಯೂ ಸೇರಿದಂತೆ, ವಿಶ್ವಾದ್ಯಂತ ಆಸ್ತಿಯನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೆ ಅವರು ಜುಹೂವಿನ ಪಿನಾಕಲ್ ಡ್ರೀಮ್ಸ್‌ನಲ್ಲಿ ಫ್ಲಾಟ್ ಒಂದನ್ನು ಖರೀದಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಭಿ ಮತ್ತು ಐಶ್, ಬಿಗ್‌ ಬಿ ಅವರ ಜಲ್ಸಾದಿಂದ ಹೊರನಡೆದು, ತಂದೆತಾಯಿಗೆ ಹತ್ತಿರವಾಗಿರುವ, ಆದರೆ ತಮ್ಮದೇ ಅದ ಪ್ರೈವೆಸಿ ಕಲ್ಪಿಸುವ ಹೊಸ ಫ್ಲಾಟ್‌ಗೆ ಸ್ಥಳಾಂತರವಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು.

ಐಶ್ ಮತ್ತು ಅಭಿ ದೂರದ ಕೋಚಿಯ ಕಾಡುಗಳಲ್ಲಿ ರಾವಣ ಚಿತ್ರದ ಚಿತ್ರೀಕರಣ ನಿರತರಾಗಿದ್ದಾರೆ. ಬಿಗ್ ಅವರನ್ನು ಸಂಪರ್ಕಿಸಿರು ಸಿನಿ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ, "ಮನೆಯಿಂದ ಹೊರಹೋಗುವ ಯಾವುದೇ ಯೋಚನೆಗಳನ್ನು ಅಭಿ ಹೊಂದಿಲ್ಲ" ಎಂದು ಪಾಪಾ ಬಚ್ಚನ್ ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಅಂತೆ ಕಂತೆಗಳಿಗೆ ಬಿಗ್ ಬಿ ಪೂರ್ಣವಿರಾಮವಿಟ್ಟಿದ್ದು, ಬಚ್ಚನ್‌ಗಳದ್ದು ಅವಿಭಕ್ತ ಕುಟುಂಬ ಎಂದು ಸಾರಿದ್ದಾರೆ.

ಪಿನಾಕಲ್ ಡ್ರೀಮ್ಸ್, ನಿರ್ಮಾಪಕ ವಾಸು ಭಗ್‌ನಾನಿ ಅವರ ಸ್ವಾಮ್ಯದಲ್ಲಿದ್ದು, ಜಲ್ಸಾದ ಎದುರುಗಡೆಯಲ್ಲಿದೆ. ಇದರಲ್ಲಿ ರಾಜ್ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಹೆಸರಿನಲ್ಲಿಯೂ ಒಂದು ಫ್ಲಾಟ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ