ಜಿಯಾ ಮಾಡಿದ ತಪ್ಪಾದರೂ ಏನು ?

IFM
ಬಾಲಿವುಡ್‌ನಲ್ಲಿ ಕೇವಲ ಒಂದು ಚಿತ್ರ ಹಳೆಯ ಜಿಯಾ ಖಾನ್‌ರ ಎರಡನೇ ಚಿತ್ರ ಗಜನಿ ಬಿಡುಗಡೆಗೆ ಸಿದ್ಧವಾಗಿದೆ, ಆದರೆ ಇದರ ಹೊರತಾಗಿಯೂ ಜಿಯಾ ಖುಷಿಯಾಗಿಲ್ಲ.

ಜಿಯಾ ಸಮಸ್ಯೆ ಏನೇಂದರೆ, ಗಜನಿ ಚಿತ್ರದ ಬಗ್ಗೆ ಎಲ್ಲೇ ಚರ್ಚೆಯಾದರೂ ಅಮೀರ್ ಖಾನ್ ಮತ್ತು ನವ ನಟಿ ಆಸಿನ್ ಬಗ್ಗೆಯೇ ಚರ್ಚಿಸಲಾಗುತ್ತದೆ, ಜಿಯಾ ಬಗ್ಗೆ ಯಾರೂ ಎಲ್ಲೂ ಮಾತನಾಡುವುದೇ ಇಲ್ಲ. ಜಿಯಾ ಈ ಚಿತ್ರದಲ್ಲಿದ್ದಾರೆ ಎಂಬುದೇ ಜನರಿಗೆ ತಿಳಿದಿಲ್ಲ. ಚಿತ್ರದ ಪ್ರಚಾರದಲ್ಲಿ ಜಿಯಾರಿಗೆ ಮಹತ್ವ ನೀಡಲಾಗಿಲ್ಲ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಜಿಯಾ ತುಂಬಾ ಬೇಸರ ಮಾಡಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಆಸಿನ್‌ಗೆ ಇಷ್ಟೊಂದು ಪ್ರಾಮುಖ್ಯತೆಯನ್ನು ಏಕೆ ನೀಡಲಾಗುತ್ತಿದೆ ಎಂಬುದು ಜಿಯಾಗೆ ಅರ್ಥವಾಗುತ್ತಿಲ್ಲ. ಜಿಯಾ ಈ ಮೊದಲು ಒಂದೇ ಚಿತ್ರದಲ್ಲಿ ನಟಿಸಿದ್ದರೂ, ತಾನು ಆಸಿನ್‌ಗಿಂತ ಸಿನೀಯರ್ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಗಜನಿ ಚಿತ್ರದ ನಿರ್ಮಾಣದಿಂದ ಹಿಡಿದು ಪ್ರಚಾರದವರೆಗಿನ ಎಲ್ಲಾ ಜವಾಬ್ದಾರಿಗಳು ಅಮೀರ್ ಹೆಗಲ ಮೇಲಿದೆ, ಇಂತಹುದರಲ್ಲಿ ಫರ್ಫೆಕ್ಷನಿಸ್ಟ್ ಎಂದೇ ಜನಜನಿತ ಅಮೀರ್ ಖಾನ್‌ಗೆ ಜಿಯಾ ಏನಾದರು ಹೇಗೆ ಹೇಳಬಲ್ಲಳೂ...

ನಿಶಬ್ಧ್ ಚಿತ್ರದ ನಂತರ ತಿಂಗಳುಗಟ್ಟಲೆ ಮನೆಯಲ್ಲಿ ಕುಳಿತಿದ್ದ ಜಿಯಾ ಗಜನಿ ಬಿಡುಗಡೆ ನಂತರ ತಮಗೆ ಉತ್ತಮ ಅಫರ್‌ಗಳು ಬರಬಹುದೆಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಪ್ರಥಮ ಚಿತ್ರದಲ್ಲೇ ಅಮಿತಾಭ್ ಬಚ್ಚನ್ ಮತ್ತು ಎರಡನೇ ಚಿತ್ರದಲ್ಲಿ ಅಮೀರ್ ಜೊತೆ ನಟಿಸುವ ಸದವಕಾಶ ಎಲ್ಲಾ ನಟಿಯರಿಗೂ ದಕ್ಕುವಂತದಲ್ಲ ಆದರೂ ಜಿಯಾ ಜೋಳಿಗೆಯಲ್ಲಿ ಚಿತ್ರಗಳಿಲ್ಲ.

ವೆಬ್ದುನಿಯಾವನ್ನು ಓದಿ