ಜೇಡ್ ಮಾಗ್ಯಜಿನ್ ಮುಖಪುಟದಲ್ಲಿ ದೀಪಿಕಾ

ಆಕೆ ಹಾಟ್ ಹುಡುಗಿ ಎಷ್ಟರ ಮಟ್ಟಿಗೆಂದರೆ, ಅವಳತ್ತ ನೋಡಿದ ಜನರು ಆಕೆಯ ಮೇಲಿನ ತಮ್ಮ ನೋಟವನ್ನು ಇನ್ನೊಂದೆಡೆ ಸರಿಸಲಾರದಷ್ಟು, ಆಕೆ ಬೇರಾರು ಅಲ್ಲ ಓಂ ಶಾಂತಿ ಓಂ ಹುಡುಗಿ ದೀಪಿಕಾ ಪಡುಕೋಣೆ. ಮಂಗಳೂರಿನ ಈ ಬೆಡಗಿ ಬಾಲಿವುಡ್‌ನಲ್ಲಿ ತಳವೂರುತ್ತಿದ್ದಾಳೆ. ಪ್ರಸ್ತುತ ಸುದ್ದಿಯೆಂದರೆ ಜೇಡ್ ಎಂಬ ಹೊಸದಾಗಿ ಆರಂಭವಾಗುತ್ತಿರುವ ಮ್ಯಾಗಜಿನ್‌ನ ಚೊಚ್ಚಲ ಪ್ರತಿಯ ಮುಖಪುಟದಲ್ಲಿ ದೀಪಿಕಾ ರಾರಾಜಿಸುತ್ತಿದ್ದಾಳೆ.

ಈ ಪ್ರತಿಯಲ್ಲಿ ದೀಪಿಕಾ ತಮ್ಮ ಹುಟ್ಟಿನಿಂದ ಹಿಡಿದು ತಮ್ಮ ನೆಚ್ಚಿನ ತಿನಿಸು, ತಾಣ ಇತ್ಯಾದಿಗಳ ಬಗೆಗೆಲ್ಲಾ ಮನ ಬಿಚ್ಚಿದ್ದಾರೆ. ಅವರು ತಮ್ಮ ತವರು ನಗರ ಬೆಂಗಳೂರಿಗಿಂತ ಮುಂಬಯಿ ಹೇಗೆ ಮತ್ತು ಏಕೆ ಭಿನ್ನ ಎಂಬುದನ್ನು ತಿಳಿಸಿದ್ದಾರೆ. ನೀವೇಲ್ಲಾ ತಡಕಾಡುವ ಮೊದಲೇ ಹೇಳಿಬಿಡುತ್ತಿದ್ದೇವೆ ಜೇಡ್‌ನಲ್ಲಿ ದೀಪಿಕಾ ಮನದನ್ನ ರಣ್‌ಬೀರ್ ಕಪೂರ್ ಬಗೆಗೂ ಮಾತನಾಡಿದ್ದಾರೆ. "ಸೂಕ್ತ ವ್ಯಕ್ತಿಯನ್ನು ಕಂಡುಕೊಳ್ಳುವುದು ಬಹಳಷ್ಟು ಬದಲಾವಣೆಯನ್ನು ಉಂಟುಮಾಡುತ್ತದೆ. ನಮಗೆ ಬೇರಾರೂ ಬೇಕಿನಿಸುವುದಿಲ್ಲ, ಪರಸ್ಪರರೊಡನೆ ಇರುವುದೇ ಪರಮಾಪ್ತವಾಗುತ್ತದೆ" ಇದು ರಣ್‌ಬೀರ್ ಬಗೆಗಿನ ಪ್ರಶ್ನೆಗೆ ಕೆನ್ನೆಕೆಂಪಾದ ದೀಪಿಕಾಳ ಉತ್ತರ.

ಜಾಡೆ ಸಂಪಾದಕರು ಬಿಡುಗಡೆ ಪ್ರತಿಗೆ ದೀಪಿಕಾಳನ್ನು ಆರಿಸಿ ತಪ್ಪೇನು ಮಾಡಿಲ್ಲ, ಅಲ್ಲವೇ...
IFM