ಜೈಲು ಭೀತಿ: ಇದೀಗ ಸಲ್ಮಾನ್ ಸರದಿ

ಶುಕ್ರವಾರ, 28 ಜೂನ್ 2013 (10:57 IST)
PR
PR
2002ರಲ್ಲಿ ನಡೆದಿದ್ದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ವಿರುದ್ದ ಉದ್ದೇಶಪೂರ್ವಕವಲ್ಲದ ಹತ್ಯೆ ಯತ್ನ ಕಾನೂನಿನಡಿಯಲ್ಲೇ ವಿಚಾರಣೆ ನಡೆಸಲು ಸ್ಥಳೀಯ ಸೆಷನ್ಸ್ ಕೋರ್ಟ ಆದೇಶಿಸಿದೆ. ಇದರಿಂದ ಪ್ರಕರಣದಲ್ಲಿ ಸಲ್ಲು ದೋಷಿ ಎಂದು ಸಾಬೀತಾದರೆ 10 ವರ್ಷ ಜೈಲು ಅನುಭವಿಸುವುದು ಅನಿವಾರ್ಯವಾಗಲಿದೆ.

ಕೆಲ ದಿನಗಳ ಹಿಂದೆಯ ನ್ಯಾಯಾಲಯ ಇದನ್ನು ಉದ್ದೇಶಪೂರ್ವಕವಲ್ಲದ ಹತ್ಯೆ ಯತ್ನ ಕಾನೂನಿನಡಿ ವಿಚಾರಣೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜೀಯ ವಿಚಾರಣೆ ನಡೆಸಿದ ಕೋರ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೊಟ್ಟಿದ್ದ ತೀರ್ಪನ್ನೇ ಎತ್ತಿ ಹಿಡಿದು ಸಲ್ಮಾನ್ ಮನವಿಯನ್ನು ತಿರಸ್ಕರಿಸಿದೆ. ಆದ್ದರಿಂದ ಒಂದು ವೇಳೆ ಪ್ರಕರಣ ಕೋರ್ಟನಲ್ಲಿ ಸಾಬೀತಾದರೆ ಸಲ್ಲು ಕನಿಷ್ಠ 10 ವರ್ಷ ಜೈಲು ವಾಸ ಅನುಭವಿಸಬೇಕಾದೀತು.

2002ರಲ್ಲಿ ಸಲ್ಮಾನ್ ಚಲಾಯಿಸುತ್ತಿದ್ದ ಕಾರು, ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದು ಒಬ್ಬರ ಪ್ರಾಣ ತೆಗೆದಿತ್ತು ಹಾಗೂ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.

ವೆಬ್ದುನಿಯಾವನ್ನು ಓದಿ