ಟಾಲಿವುಡ್ ಸಿನಿ ಮಾಫಿಯಾ ಕಪಿಮುಷ್ಟಿಯಿಂದ ಅಮಾಯಕ ಕಲಾವಿದರಿಗೆಂದು ಮುಕ್ತಿ?

ಗುರುವಾರ, 9 ಜನವರಿ 2014 (11:44 IST)
PR
ಯಾರೂ ನಿರೀಕ್ಷಿಸಿದೆ ಇರುವಂತಹ ಘಟನೆ ಟಾಲಿವುಡ್ ನಲ್ಲಿ ನಡೆದಿದೆ. ಚಾಕಲೇಟ್ ಹೀರೋ ಪಟ್ಟ ಹೊಂದಿದ್ದ ನಟ ಉದಯ್ ಕಿರಣ್ ಆತ್ಮಹತ್ಯೆ ಮಾಡಿಕೊಂಡು ಇಡಿ ಚಿತ್ರರಂಗವನ್ನು ದಿಗ್ಬ್ರಾಂತಿಗೊಳಿಸಿದ್ದಾರೆ. ಇಂತಹ ಪರಿಸ್ಥಿತಿ ಎದುರಾಗಲು ಟಾಲಿವುಡ್ ಚಿತ್ರರಂಗದ ಮಾಫಿಯ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ತಮ್ಮ ಮಕ್ಕಳು ಚಿತ್ರರಂಗದಲ್ಲಿ ಯಶಸ್ಸು ಕಾಣ ಬೇಕು ಎನ್ನುವ ದೃಷ್ಟಿಯಿಂದ ಹೊಸ ಹಂಚಿಕೆ ದಾರರು, ನಿರ್ಮಾಪಕರು, ನಿರ್ದೇಶಕರಲ್ಲದೇ ನವ ನಟ-ನಟಿಯರು ಸಹ ಧೈರ್ಯದಿಂದ ಬದುಕಲು ಸಾಧ್ಯ ಆಗದೇ ಇರುವಂತಹ ವಾತಾವರಣ ಉಂಟಾಗಿದೆ. ಇದು ಎಲ್ಲರಿಗೂ ತಿಳಿದ ಬಹಿರಂಗ ಸತ್ಯವಾಗಿದೆ. ಉದಯ್ ಕಿರಣ್ ಅವರ ಆತ್ಮಹತ್ಯೆಯಿಂದ ಹಿರಿಯ ಕಲಾವಿದರು ಈ ಬಗ್ಗೆ ತೀವ್ರವಾದ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೆಲವು ಮಂದಿ ನ್ಯಾಯ ಮೂರ್ತಿಗಳು ರಾಜ್ಯ ಮಾನವ ಹಕ್ಕುಗಳ ಕಮೀಷನ್ ಗೆ ಮನವಿ ಮಾಡಿದ್ದಾರೆ. ಈ ಮಾಫಿಯಾಗಳಿಗೆ ಒಂದು ಶಾಶ್ವತವಾದ ಪರಿಹಾರ ನೀಡಬೇಕು ಎಂದು ಅಲ್ಲಿನ ಹಿರಿಯ ಕಲಾವಿದರು ಆಗ್ರಹಿಸಿದ್ದಾರೆ.

ಹೀಗೆ ಪರಿಸ್ಥಿತಿ ಮುಂದುವರೆದರೆ ಮತ್ತೊಂದಷ್ಟು ಅಮಾಯಕರು ಸಾವಿಗೆ ಈಡಾಗುತ್ತರೆಂದು ಟಾಲಿವುಡ್ ಮಂದಿಯ ಕಳಕಳಿ ಆಗಿದೆ. ಅಲ್ಲಿನ ಸಿನಿಮದವರು ನೀಡಿದ ತೊಂದರೆಯಿಂದ ಹಿರಿಯ ನಟ ಸುಮನ್ ಎದುರಿಸಿದ ತೊಂದರೆ ಕಷ್ಟಗಳು ಮತ್ತು ಅವರ ಕೆರಿಯರ್ ಗ್ರಾಫ್ ಯಾವರೀತಿ ಕೆಳಗಿಳಿಯಿತು ಎಂಬುದರ ಬಗ್ಗೆ ಈಗ ಎಲ್ಲರಿಗೂ ತಿಳಿದ ರಹಸ್ಯವಾಗಿದೆ.ಸುಮನ್ ಟಾಲಿವುಡ್ ನ ಅತ್ಯಂತ ಸ್ಫುರದ್ರೂಪಿ ನಟ. ಆತ ನಟಿಸಿದ ಚಿತ್ರಗಳಲ್ಲಿ ಅನೇಕವು ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಆತನ ಚಿತ್ರಗಳು ಬಿ, ಸಿ ಕ್ಲಾಸ್ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಆದರೆ ಅದೇನಾಯಿತೋ ಅಂತೂ ಇದ್ದಕ್ಕಿದ್ದ ಹಾಗೆ ಸುಮನ್ ತಾವು ನಟಿಸುವುದಕ್ಕೆ ಗುಡ್ ಬೈ ಹೇಳಿ ಕೆಲವು ವರ್ಷಗಳು ಅಜ್ಞಾತವಾಗಿ ಬಿಟ್ಟರು.

ಆ ಬಳಿಕ ಮತ್ತೇ ತೆರೆಗೆ ಬಂದ ಆ ನಟ ಈಗ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತನ್ನ ಸಿನಿಮಾ ಬದುಕಲ್ಲಿ ಗಾಡ್ ಫಾದರ್ ಇಲ್ಲದೇ ಬೆಳೆದ ಸುಮನ್ ಅಂತಿಮವಾಗಿ ಶತದಿನದ ಚಿತ್ರಗಳ ನಾಯಕರಾಗಿ ಬೆಳೆದರೂ ಅಂತಿಮವಾಗಿ ಏನೂ ಇಲ್ಲದಂತಹ ಪರಿಸ್ಥಿತಿಯನ್ನು ತಮ್ಮದಾಗಿಸಿಕೊಳ್ಳಲು ಕಾರಣ ಯಾರು ಎಂಬುದರ ಬಗ್ಗೆ ಟಾಲಿವುಡ್ ಮಂದಿ ಬಲ್ಲ ನಿಜ ಸತ್ಯ ವಾಗಿದೆ.

ಕೇಂದ್ರ ಮಂತ್ರಿ ಚಿರಂಜೀವಿ ಅವರ ಹಿರಿಯ ಮಗಳನ್ನು ಮದುವೆ ಆಗುವುದಕ್ಕೆ ಒಲ್ಲದ ಕಾರಣ ಉದಯ್ ಕಿರಣ್ ಅವಕಾಶಗಲನ್ನು ದೂರ ಮಾಡಿಕೊಂಡರು. ಆ ಮೊದಲು ಅವರು ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದರು. ಆದರೇ ಆವರೆಗೂ ಹಿಟ್ ಚಿತ್ರಗಳನ್ನು ನೀಡಿದ್ದ ಉದಯ್ ಕಿರಣ್ ಕೇವಲ ಚಿರು ಮಗಳನ್ನು ರಿಜೆಕ್ಟ್ ಮಾಡಿದ್ದಕ್ಕೆ ತನ್ನ ತಾರಾಬದುಕಿಗೆ ಬೆಂಕಿ ಇಟ್ಟುಕೊಳ್ಳುವಂತಾಯಿತು. ಒಟ್ಟಾರೆ ಹೇಳುವುದಾದರೆ ಇಂತಹ ಪ್ರತಿಭೆಗಳ ದಾರಿಗೆ ಅಡ್ಡವಾಗಿರುವ ಟಾಲಿವುಡ್ ಸಿನಿ ಮಾಫಿಯ ಮುಳ್ಳುಗಳನ್ನು ಯಾರು ಕಿತ್ತೊಗೆಯುತ್ತಾರೆ ಎಂಬುದೇ ಈಗ ಟಾಲಿವುಡ್ ಮಂದಿಯನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ

ವೆಬ್ದುನಿಯಾವನ್ನು ಓದಿ