ತಮನ್ನ ಐ ಟಂ ಸಾಂಗ್ ಗೆ ಪಡೆದ ಮೊತ್ತ ಕಂಡು ಸಮಂತಳಿಗೆ ಉರಿ ಉರಿಯಂತೆ!

ಮಂಗಳವಾರ, 1 ಏಪ್ರಿಲ್ 2014 (10:33 IST)
PR
ಹಾಟ್ ತಮನ್ನ ಕಳೆದ ವರ್ಷದವರೆಗೂ ಟಾಲಿವುಡ್ ನ ನಂಬರ್ ಒನ್ ಪೊಸಿಶನ್ ನಲ್ಲಿ ಇದ್ದ ಚೆಲುವೆ. ಆದರೆ ಬಾಲಿವುಡ್, ಅದೂ ಇದೂ ಅಂತ ಓಡಾಡುವುದರಲ್ಲಿ ಆಕೆಯ ಸ್ಥಾನದಲ್ಲಿ ಈಗ ಮಾರ್ಪಾಟು ಆಗಿದ್ದು ಸತ್ಯ.

ತಮನ್ನ ಈಗ ಐಟಂ ನಂಬರ್ ಕಡೆಗೆ ತನ್ನ ಚಿತ್ತ ನೆಟ್ಟಿದ್ದಾಳೆ ಎಂದೇ ಹೇಳ ಬಹುದು. ಆದರೆ ಆಕೆ ಹೀರೋಯಿನ್ ಆಗಿ ನಟಿಸ ಬೇಕಿದ್ದ ಚಿತ್ರದಲ್ಲಿ ಐಟಂ ನಂಬರ್ ಆಗಿ ಕಾಣಿಸಿ ಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ವಿನಾಯಕ್ ಬೆಲ್ಲಕೊಂಡ ಶ್ರೀನಿವಾಸ್ ಅವರ ಚಿತ್ರದಲ್ಲಿ ತಮನ್ನ ಮತ್ತು ಸಮಂತ ಇಬ್ಬರಲ್ಲೊಬ್ಬರಿಗೆ ಹೀರೋಯಿನ್ ಆಗುವುದಕ್ಕೆ ಅವಕಾಶ ಒದಗಿ ಬಂದಿತ್ತು .

PR
ಆದರೆ ತಮನ್ನಳಿಗೆ ಆ ಸಮಯದಲ್ಲಿ ಬಿಡುವೆ ಇಲ್ಲದ ಕಾರಣ ಆಕೆ ಇದಕ್ಕೆ ದೇಟ್ಸ್ ನೀಡಲು ಆಗಲಿಲ್ಲ. ಆಗ ಆ ಭಾಗ್ಯ ಸಿಕ್ಕಿದ್ದು ಸಮಂತಳಿಗೆ. ಅದಕ್ಕೆಂದು ಸಮ್ಮು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದು ನಟಿಸಲು ಸಿದ್ಧ ಆದಳು.

ಅದಾದ ಬಳಿಕ ಈ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ನಟಿಸಲೆಂದು ಈಗ ತಮನ್ನಳಿಗೆ ಅವಕಾಶ ನೀಡಿದ್ದಾರೆ ಬೆಲ್ಲಕೊಂಡ .. ಇವರ ಮಗನ ಮೊದಲ ಚಿತ್ರ ಆದ ಕಾರಣ ಈ ಚಿತ್ರದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ ನಿರ್ಮಾಪಕರು. ಈ ಚಿತ್ರದ ಐಟಂ ನಂಬರ್ ಗೆ ತಮನ್ನ ಬರೋಬ್ಬರಿ 65ಲಕ್ಷ ರೂಪಾಯಿಗಳನ್ನು ಪಡೆದಿದ್ದಾಳಂತೆ. ಅಂದರೆ ಆ ಹಾಡು ಇನ್ನೆಷ್ಟು ರೇಂಜ್ ನಲ್ಲಿ ಇರ ಬೇಕು !

ವೆಬ್ದುನಿಯಾವನ್ನು ಓದಿ