ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Sampriya

ಸೋಮವಾರ, 7 ಜುಲೈ 2025 (19:06 IST)
ಬೆಂಗಳೂರು: ಸಹನಟಿಗೆ ಲೈಂಗಿಕ ದೌರ್ಜನ್ಯ ನೀಡಿದ ದೂರಿನ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಜೈಲಿನಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಮಡೆನೂರು ಮನು ಕನ್ನಡದ ಕೆಲ ನಟರ ಬಗ್ಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. 

ಈ ಆಡಿಯೋ ಸಂಬಂಧ ಮಡೆನೂರು ಮನು, ನಟರಾದ ಶಿವಣ್ಣ ಹಾಗೂ ಧ್ರುವ ಸರ್ಜಾ, ದರ್ಶನ್  ಬಳಿ ಕ್ಷಮೆ ಕೋರಿದ್ದರು.  ಇದೀಗ ನಟ ದರ್ಶನ್ ತೂಗುದೀಪ್ ಅವರಿಗೆ ಕ್ಷಮೆ ಕೇಳಿ ವಿಡಿಯೋ ರಿಲೀಸ್ ಮಾಡಿದ್ದಾರೆ. 

ಆ ವಿಡಿಯೋದಲ್ಲಿ "ಇತ್ತೀಚಿಗೆ ಒಂದು ಆಡಿಯೋ ವೈರಲ್ ಆದಾಗ, ಬಹಿರಂಗವಾಗಿ ಒಂದು ಕ್ಷಮೆ ಯಾಚಿಸಿದ್ದೆ. ಡಿ ಬಾಸ್ ಫ್ಯಾನ್ಸ್ ನನಗೆ ಮೆಸೇಜ್, ಕಮೆಂಟ್ಸ್ ಮಾಡಿದ್ರು, ಫೋನ್ ಕೂಡ ಮಾಡಿದ್ರು. 'ಬಾಸ್‌ಗೆ ಕ್ಷಮೆ ಕೇಳಿದ್ರಾ, ಹೋಗಿದ್ರಾ, ಮೀಟ್ ಮಾಡಿದ್ರಾ, ಒಂದು ಸತಿ ಮೀಟ್ ಮಾಡಿ, ಮತ್ತೆ ನಿಮ್ಮ ಸಿನಿಮಾವನ್ನ (ಕುಲದಲ್ಲಿ ಕೀಳ್ಯಾವುದೋ) ರೀ-ರಿಲೀಸ್ ಮಾಡಿಸೋಣ..' ಅಂತೆಲ್ಲಾ ಸುಮಾರು ಜನ ಪ್ರೀತಿಯಿಂದ ಕೇಳಿದ್ದಾರೆ" ಎಂದು ಮನು ಹೇಳಿದ್ದಾರೆ.

"ನಾನು ಮೀಟ್ ಮಾಡೋಕೆ ಪ್ರಯತ್ನಿಸಿದೆ. ಫೋನ್ ಕೂಡ ಮಾಡಿದೆ. ಆದರೆ ಬಾಸ್ (ದರ್ಶನ್) ಬ್ಯುಸಿ ಇದ್ದಾರೆ ಅಂತ ಗೊತ್ತಾಯ್ತು. ಹಂಗಾಗಿ ಬಹಿರಂಗವಾಗಿ ನಾನೇ ಒಂದು ಕ್ಷಮೆ ಯಾಚಿಸೋಣ ಅಂತ ಒಂದು ವಿಡಿಯೋ ಮಾಡ್ತಾ ಇದೀನಿ. ಡಿಬಾಸ್, ದಯಮಾಡಿ ಪುಟ್ಟ ಕಲಾವಿದ ನಾನು, ಸಹವಾಸಗಳನ್ನ ಮಾಡಿ, ಜೊತೆಲೇ ಇರೋರನ್ನ ನಂಬಿ, ಈ ಒಂದು ಆಡಿಯೋಗೆ ಬಲಿಯಾಗಿದ್ದೀನಿ ದಯಮಾಡಿ ನನ್ನನ್ನು ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ..." ಎಂದು ಮನು ಕೇಳಿಕೊಂಡಿದ್ದಾರೆ.


https://www.instagram.com/reel/DLwdldkpsCt/?utm_source=ig_web_copy_link

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ