ತೆಲಂಗಾಣದವರೇ ಅಮೆರಿಕವನ್ನು ನೋಡಿ ಕಲೀರಿ ಅಂದ್ರು ಭೂತ ನಿರ್ದೇಶಕ ರಾಂ ಗೋಪಾಲ್ ವರ್ಮ.. ಏನನ್ನು?

ಸೋಮವಾರ, 9 ಡಿಸೆಂಬರ್ 2013 (11:22 IST)
PR
ಭಾರತೀಯ ಚಿತ್ರರಂಗದ ವಿಕ್ಷಪ್ತ ಮನದ ನಿರ್ದೇಶಕ ರಾಮ್ ಗೋಪಾಲ್ ವರ್ಮ. ಆತನ ಹೇಳಿಕೆಗಳು ಸಿಕ್ಕಾಪಟ್ಟೆ ವಿವಾದ ತಂದಿಡುತ್ತದೆ. ಸದಾ ಭೂತಗಳ ಚಿತ್ರಗಳ ತಯಾರಿಕೆಯಲ್ಲಿ ತೊಡಗುವ ಈ ಭೂಗತ ನಿರ್ದೇಶಕ ಆಂಧ್ರಪ್ರದೇಶದ ವಿಭಜನೆಯ ಬಗ್ಗೆ ಮತ್ತು ತೆಲಂಗಾಣ ಸಮಿತಿಯ ಅಧ್ಯಕ್ಷ ಕೆ. ಚಂದ್ರಶೇಖರ ರಾವು ಬಗ್ಗೆ ತನ್ನದೇ ಆದ ವಿಚಿತ್ರ ರೀತಿಯಲ್ಲಿ ಸ್ಪಂದಿಸಿ ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಯಾವುದೇ ರಾಜ್ಯ ವೂ ಸಹ ಪ್ರತ್ಯೇಕತೆಯ ಬಗ್ಗೆ ಧನಿ ಎತ್ತುವುದಿಲ್ಲ. ಆದರೇ ಭಾರತದಲ್ಲಿರುವ ರಾಜ್ಯಗಳಲ್ಲಿ ಏಕತೆಯ ಕೊರತೆ ಇದೆ. ಒಟ್ಟಾಗಿ ಇರುವ ಮನಸ್ಥಿತಿ ಇಲ್ಲದೇ ಇರುವುದರಿಂದ ವಿಭಜನೆಗೆ ಆಶಿಸುತ್ತವೆ.

ಒಟ್ಟಿಗೆ ಇರುವ ಗುಣವನ್ನು ಅಮೆರಿಕ ನೋಡಿ ನಮ್ಮವರು ಕಲಿಯಬೇಕಾಗಿದೆ. ಅಮೆರಿಕನ್ನರು ಮದ್ಯ, ಸೆಕ್ಸ್ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ ವಿನಃ ರಾಜ್ಯ ಗಳ ವಿಭಜನೆಯ ಬಗ್ಗೆ ಅಲ್ಲವೇ ಅಲ್ಲ ಅಮೆರಿಕದಲ್ಲಿರುವ ಯಾವ ರಾಜ್ಯಗಳು ಏಕೆ ಬಿಡುಗಡೆ ಬಯಸಿಲ್ಲ? ಅಲ್ಲಿ ಕೆಸಿಆರ್ ರಂತಹ ನಾಯಕರು ಇಲ್ಲದೇ ಇರುವುದೇ ಇದಕ್ಕೆ ಕಾರಣವೇ? ಅಕಸ್ಮಾತ್ ಕೆಸಿಆರ್ ವಾಷಿಂಗ್ ಟನ್ ನಲ್ಲಿ ಹುಟ್ಟಿದ್ದರೆ ಅಲ್ಲಿ ಅದೇನು ಕಡಿದು ಪೇರಿಸುತ್ತಿದ್ದರೋ ಕಾಣೆ..! ಎಂದು ಮನಕ್ಕೆ ತೋಚಿದ್ದನ್ನೆಲ್ಲಾ ಟ್ವೀಟ್ ಮಾಡಿದ್ದಾರೆ ರಾಂ ಗೋಪಾಲ್ ವರ್ಮ. ಆಂಧ್ರದಲ್ಲಿನ ಸಾಮಾಜಿಕ-ಆರ್ಥಿಕ ಹಾಗೂ ರಾಜಕೀಯ ಒಳಸುಳಿಗಳ ಒಟ್ಟು ಪರಿಣಾಮ ಈ ವಿಭಜನೆ. ದೊಡ್ಡ ಸ್ಥಾನದಲ್ಲಿರುವ ರಾಂ ಗೋಪಾಲ್ ವರ್ಮ ಇಂತಹ ಸಣ್ಣ ಮಾತನ್ನು ಕೆಸಿಆರ್ ಬಗ್ಗೆ ಆಡಿರುವುದು ಹಾಗೂ ತೆಲಂಗಾಣದ ಬಗ್ಗೆ ವ್ಯಕ್ತಪಡಿಸಿರುವ ಭಾವನೆ ಅಲ್ಲಿನವರಿಗೆ ಸಿಟ್ಟು ತರಿಸಿದೆ. ಭೂತಗಳ ಜೊತೆ ಇರುವವರಿಗೆ ಮನುಷ್ಯರೆಲ್ಲಿ ಅರ್ಥವಾಗ್ತಾರೆ ಎನ್ನುತ್ತಿದ್ದಾರೆ ಜನರು ?

ವೆಬ್ದುನಿಯಾವನ್ನು ಓದಿ