ನಾಗರ್ಜುನ್ಗೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ನಟಿಸುವಾಸೆಯಂತೆ!

ಗುರುವಾರ, 16 ಜನವರಿ 2014 (12:28 IST)
PR
ತಾನು ಇನ್ನು ಮುಂದೆ ಹೆಚ್ಚ್ಹಾಗಿ ಸೋಲೋ ಚಿತ್ರಗಳಲ್ಲಿ ನಟಿಸುವುದಕ್ಕಿಂತ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸುವ ಬಗ್ಗೆ ಆಶಯ ಹೊಂದಿದ್ದಾರೆ ನಟ ನಾಗಾರ್ಜುನ. ಪ್ರಸ್ತುತ ಅವರು ತಮ್ಮ ತಂದೆ ನಾಗೇಶ್ವರ್ ರಾವ್, ಮಗ ನಾಗ ಚೈತನ್ಯ ಜೊತೆ ಮನಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಮುಂದೆ ತಾವು ಹೆಚ್ಚ್ಹಾಗಿ ಈ ರೀತಿಯ ಚಿತ್ರಗಳಲ್ಲಿ ನಟಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಇದೆ ರೀತಿಯ ನಿರ್ಧಾರವನ್ನು ನಟ ವಿಕ್ಟರಿ ವೆಂಕಟೇಶ್ ಸಹ ಹೊಂದಿರುವುದು ಟಾಲಿವುಡ್ ಪಾಲಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಖುಷಿಯ ಸಂಗತಿಆಗಿದೆ. ತನ್ನ ಮಗ ಮರಿ ನಾಗ್ ಒಪ್ಪಿದರೆ ಮತ್ತೊಂದಷ್ಟು ಮಲ್ಟಿ ಸ್ಟಾರ್ ಚಿತ್ರಗಳನ್ನು ನಿರ್ಮಿಸಿ ನಟಿಸುವುದಾಗಿ ಹೇಳಿದ್ದಾರೆ ನಾಗ್.. ನೋಡುವ ಏನಾಗುತ್ತದೆ ಎಂದು.. ಸದ್ಯಕ್ಕೆ ನಾಗ್ ಅವರ ನಿರ್ಧಾರದಿಂದ ಯುವನಟರಿಗೆ ನೆಮ್ಮದಿಯ ನಿಟ್ಟಿಸಿರು ಬಂದಿದೆ ಅನ್ನೋದೇ ಟಾಲಿವುಡ್ ನ ಹಾಟ್ ಸುದ್ದಿ ! ಆದರೆ ತಮ್ಮ ಮೊದಲ ಮಗ ಆರಂಭದಲ್ಲೇ ಎಡವಿದ್ದು, ಈಗ ಎರಡನೇ ಮಗನ ಸಿನಿ ಎಂಟ್ರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಗ್ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಎಲ್ಲರು ಬಲ್ಲ ಸತ್ಯ !

ವೆಬ್ದುನಿಯಾವನ್ನು ಓದಿ