ನಿಮಗೆ ಖುಷಿ ಆಯ್ತು ತಾನೇ ಎಂದು ಪತ್ರಕರ್ತರಿಗೆ ಪ್ರಶ್ನೆ ಕೇಳಿದ ದೀಪಿಕ

ಸೋಮವಾರ, 20 ಜನವರಿ 2014 (12:20 IST)
PR
ಸಿದ್ಧಾರ್ಥ್ ಮಲ್ಯ, ರಣವೀರ್ ಕಪೂರ್ ಮತ್ತು ರಣವೀರ್ ಸಿಂಗ್ ಇದು ಹಾಟಿನಿ ದೀಪಿಕ ಪಡುಕೋಣೆ ಪ್ರೀತಿಸಿದ ಹುಡುಗರ ಪಟ್ಟಿ. ಆರಂಭದಲ್ಲಿ ಆಕೆ ಸಿದ್ಧಾರ್ಥ್ ಜೊತೆ ಪ್ರೀತಿಸಿದರು, ಆತನನ್ನು ಬಿಟ್ಟು ರಣವೀರ್ ಕಪೂರ್ ಜೊತೆಯಾದರು. ಇನ್ನೇನು ಇಬ್ಬರದ್ದು ಮದುವೆ ಆಗಿ ಬಿಡುತ್ತದೆ ಎಂದು ತಿಳಿಯುವಷ್ಟರಲ್ಲಿ ಆತನ ಜೊತೆ ಬೈ ಹೇಳಿ ಹೇಳಿದ ಬಳಿಕ ರಣವೀರ್ ಸಿಂಗ್ ಜೊತೆ ಪ್ರೀತಿ ಆರಂಭಿಸಿದಳು ಈ ಚೆಲುವೆ. ಆದರೆ ಆತನ ಜೊತೆಗೂ ಗುಡ್ ಬೈ ಹೇಳಿದ್ದಳಂತೆ ಆಕೆ. ಆತನನ್ನು ಬಿಟ್ಟು ಈಗಾಗಲೇ ಹದಿನೈದು ದಿನಗಳು ಆಗಿದೆಯಂತೆ. ಈ ತಿಂಗಳ ಐದನೇ ತಾರೀಖು ಇವಳ ಹುಟ್ಟು ಹಬ್ಬ ಇತ್ತು . ಈ ಜೋಡಿ ನ್ಯೂಯಾರ್ಕ್ ಗೆ ಹೋಗಿದ್ದರು. ಆಗ ಅಲ್ಲಿ ಏನೋ ನಡೆದಿದೆ ಆದ ಕಾರಣ ದೀಪಿಕ ಇಂತಹ ನಿರ್ಧಾರಕ್ಕೆ ಬಂದಿದ್ದಾಳೆ ಎಂಬುದು ಬಿಟೌನ್ ಮಾತುಗಳು.

ಏಕೆಂದರೆ ಇತ್ತಿಚೆಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೀಪಿಕಾ ಬಳಿ ರಣವೀರ್ ಬಗ್ಗೆ ಕೇಳಿದಾಗ ತಾನು ಇನ್ನು ಸಿಂಗಲ್ ಆಗಿ ಇದ್ದೇನೆ, ನಿಮಗೆ ಖುಷಿ ತಾನೇ ಎಂದು ಹೇಳಿದಳಂತೆ ನಗುತ್ತಾ.

ಈ ನಗುವನ್ನು ಕಂಡಾಗ ರಣವೀರ್ ಜೊತೆ ಆಕೆ ಬಾಂಧವ್ಯ ಬಿಟ್ಟ ಬಳಿಕ ಖುಷಿಯಾಗಿ ಇದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಇತ್ತೀಚಿಗೆ ನಡೆದ ಎರಡು ಮೂರು ಕಾರ್ಯಕ್ರಮಗಳಲ್ಲಿ ಇವರಿಬ್ಬರು ಬೇರೆಬೇರೆಯಾಗಿ ಬಂದದ್ದು ಸಹ ಈ ಫ್ರೆಂಡ್ ಶಿಪ್ ಮುಗಿದಿದೆ ಎನ್ನುವುದು ಸ್ಪಷ್ಟವಾಗಿ ತಿಳಿಸುತ್ತದೆ.

ವೆಬ್ದುನಿಯಾವನ್ನು ಓದಿ