ಪತಿ ಮೇಲೆ ಡೌರಿ ಕೇಸು ದಾಖಲಿಸಿದ ಯುಕ್ತಾ ಮುಖಿ

ಸೋಮವಾರ, 8 ಜುಲೈ 2013 (13:10 IST)
PR
PR
ಮಾಜಿ ವಿಶ್ವಸುಂದರಿ ನಟಿ ಯುಕ್ತಾ ಮುಖಿ ಪತಿಯ ಮೇಲೆ ವರದಕ್ಷಿಣೆ ಹಿಂಸೆಯ ಕೇಸು ದಾಖಲಿಸಿದ್ದಾಳೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ಪ್ರಿನ್ಸ್ ಟುಲಿ ಆಕೆ ವರದಕ್ಷಿಣೆಯ ಕೇಸು ದಾಖಲಿಸಿದ್ದಾರೆ.

ಮುಂದಿನ ಕ್ರಮ ಕೈಗೊಳ್ಳದ ಮೊದಲು ಪತಿ ಟುಲಿ ಅವರನ್ನು ಕರೆಸಿ ವಿಚಾರಣೆ ನಡೆಸುವುದಾಗಿ ತನಿಖಾಧಿಕಾರಿ ಪ್ರಭಾಕರ್ ಮೇಧೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ಯುಕ್ತಾ ನಿರಾಕರಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಯುಕ್ತಾ ದೌರ್ಜನ್ಯ ಕುರಿತು ಪೊಲೀಸರಿಗೆ ಲಿಖಿತ ಅರ್ಜಿ ನೀಡಿದ್ದರು. ಪೊಲೀಸರು ಆ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದರು. ಯಾವುದೇ ಎಫ್ಐಆರ್ ದಾಖಲಿಸದ ಕಾರಣ ಅದು ಅಲ್ಲಿಗೆ ಸಪ್ಪೆಯಾಯಿತು. ಕೆಲ ದಿನಗಳ ಬಳಿಕ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ಯುಕ್ತಾ ಕೇಳಿಕೊಂಡಿದ್ದರು. ಅಲ್ಲಿಗೆ ಅದು ಎಲ್ಲರಿಗೂ ಮರೆತು ಹೋಗಿತ್ತು.

2008ರಲ್ಲಿ ನಾಗ್ಪುರದಲ್ಲಿ ಸಾರಿಗೆ ಮತ್ತು ಆತಿಥ್ಯ ಉದ್ಯಮದಲ್ಲಿ ತೊಡಗಿದ್ದ ಕುಟುಂಬದ ಟುಲಿ ಅವರನ್ನು ಯುಕ್ತಾಮುಖಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಹೆತ್ತವರೊಂದಿಗೆ ವಾಸವಾಗಿರುವ ಈಕೆಗೆ ಮೂರು ವರ್ಷದ ಮಗನೂ ಇದ್ದಾನೆ.

ವೆಬ್ದುನಿಯಾವನ್ನು ಓದಿ