ಪ್ರಾಮಾಣಿಕರಿಗೆ ರಾಜಕೀಯ ಸೂಟ್ ಆಗಲ್ಲ ಅಂತಾರೆ ವೆಂಕಟೇಶ್.. ಹಾಗಾದ್ರೆ ಚಿರಂಜೀವಿ?

ಶುಕ್ರವಾರ, 29 ನವೆಂಬರ್ 2013 (11:08 IST)
PIB
ಕಳೆದ ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಗೆಲುವಿನ ರುಚಿಯನ್ನು ಅನುಭವಿಸುತ್ತ ಬಂದನಟ ವಿಕ್ಟರಿ ವೆಂಕಟೇಶ್. ಟಾಲಿವುಡ್ ಟಾಪ್ ಹೀರೋಗಳಲ್ಲಿ ವೆಂಕಟೇಶ್ ದೂ ಸಹ ಪ್ರಮುಖ ಹೆಸರು. ಆದರೇ ಈಗೀಗ ಅವರ ಚಾರ್ಮ್ ಕುಸಿಯುತ್ತಿದೆ. ಹೊಸದಾಗಿ ಇಂಡಸ್ಟ್ರಿಗೆ ಎಂಟ್ರಿ ಆಗಿರುವ ಯುವ ನಾಯಕರ ಮುಂದೆ ಸೋಲುವ ಪರಿಸ್ಥಿತಿ ಎದುರಾಗಿದೆ. ಯಾವಾಗಲೂ ಕಾಲ ಒಂದೇ ರೀತಿ ಇರಲ್ಲ! ಈಗ ವೆಂಕಟೇಶ್ ತನ್ನ ಕೆರಿಯರ್ ಕಾಪಾಡಿಕೊಳ್ಳಲು ಯುವ ಹಿರೋಗಳ ಜೊತೆ ಮಲ್ಟಿ ಸ್ಟಾರರ್ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದಾರೆ.

ವೈಯುಕ್ತಿಕ ಬದುಕಲ್ಲಿ ಆಧ್ಯಾತ್ಮಿಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ವೆಂಕಿಗೆ ವಿವೇಕಾನಂದರ ರಚನೆಗಳನ್ನು ಓದುವುದೆಂದರೆ ಪಂಚಪ್ರಾಣ.ಇತ್ತೀಚೆಗೆ ಬಿಡುಗಡೆ ಆದ ತನ್ನ ಹೊಸ ಚಿತ್ರ ಮಸಾಲ ಪ್ರಮೋಷನ್ ಗೆ ಸಂಬಂಧಿಸಿದಂತೆ ಮಾಧ್ಯಮಿಗಳ ಜೊತೆ ಮಾತನಾಡುತ್ತಾ ಇರುವಾಗಮಾಧ್ಯಮದವರು ನೀವು ಸಿನಿಮಾ ರಂಗಕ್ಕೆ ಬೈ ಹೇಳಿ ರಾಜಕೀಯ ಕ್ಷೇತ್ರಕ್ಕೆ ಬರಬಹುದಲ್ಲವೇ ? ಎಂದು ಪ್ರಶ್ನೆ ಎಸೆದರು. ಆಗ ಒಂದು ಕ್ಷಣವೂ ಚಿಂತಿಸದೇ ವೆಂಕಿ ಈಗಿನ ರಾಜಕೀಯ ಪ್ರಾಮಾಣಿಕರಿಗೆ ಹೇಳಿಮಾಡಿಸಿದ ಕ್ಷೇತ್ರವಲ್ಲ ಎಂದು ತಕ್ಷಣ ಉತ್ತರಿಸಿದರು. ಕೆಟ್ಟ ಗುಣಬೆಳಸಿಕೊಳ್ಳ ಬೇಕು ಎಂದು ಬಯಸುವವರು ಈ ಕ್ಷೇತ್ರಕ್ಕೆ ಸೂಕ್ತ ಎಂದು ಸಹ ಹೇಳಿ ಅಲ್ಲಿ ನೆರೆದಿದ್ದವರಲ್ಲಿ ಆಶ್ಚರ್ಯ ಉಂಟು ಮಾಡಿದರು.

ಆದರೇ ನಟ ಚಿರಂಜೀವಿ ಸಹ ರಾಜಕೀಯಕ್ಕೆ ಬಂದಿದ್ದಾರಲ್ಲ ಎನ್ನುವ ಮೊನಚಾದ ಪ್ರಶ್ನೆಗೆ ವೆಂಕಿ ಹೇಳಿದ್ದು ರಾಜಕೀಯಕ್ಕೆ ಚಿರಂಜೀವಿ ಬರುವುದಕ್ಕೆ ಮುನ್ನ ಎಲ್ಲರಿಗೂ ಬೇಕಾದವರಾಗಿದ್ದರು.. ರಾಜಕೀಯಕ್ಕೆ ಬಂದ ಬಳಿಕ ಕೆಲವರಿಗೆ ಮಾತ್ರ ಬೇಕಾದವರಾಗಿದ್ದಾರೆ ಎಂದು ರಿಬೌಂಡ್ ಬಾರಿಸಿದರು!

ವೆಬ್ದುನಿಯಾವನ್ನು ಓದಿ