ಪ್ರಿಯಾಮಣಿ ಬೀರುಗೆ ಬರ್ತಡೇ ವಿಷ್ ಮಾಡಿದ್ದು ಹೀಂಗಾ!

ಶುಕ್ರವಾರ, 7 ಫೆಬ್ರವರಿ 2014 (09:58 IST)
PR
ದಕ್ಷಿಣ ಭಾರತದ ಚೆಲುವೆ ಮತ್ತು ಬೆಂಗಳೂರಿನ ಹುಡುಗಿ ಪ್ರಿಯಾಮಣಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಜೊತೆಗೆ ಒಂದು ಬಗೆ ಆಪ್ತವಾದ ಸ್ನೇಹ ಬಾಂಧವ್ಯ ಹೊಂದಿದ್ದಾಳೆ. ಆಕೆ ಇತ್ತೀಚೆಗೆ ತನ್ನ ಮಿತ್ರ ಅಭಿಷೇಕ್ ಬಚ್ಚನ್ ಅವರ ಜನ್ಮ ದಿನದಂದು ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ .ವಿಭಿನ್ನವಾಗಿ ಟ್ವೀಟಿಸಿದ್ದಾಳೆ.

ಪ್ರಿಯಾಮಣಿ ಜೂನಿಯರ್ ಬಚ್ಚನ್ ಅವರ ಜೊತೆ ರಾವಣ್ ಚಿತ್ರದಲ್ಲಿ ಹಿರಿತೆರೆಯನ್ನು ಹಂಚಿಕೊಂಡಿದ್ದಾಳೆ . ಅದು ಮಣಿರತ್ನಂ ಅವರ ನಿರ್ದೇಶನದಿಂದ ತಯಾರಾದ ಚಿತ್ರ. ಆಕೆ ಅಭಿ ಜನ್ಮ ದಿನದಂದು ಬೀರು ಎಂದು ಕರೆದು ಆಹ್ಲಾದಕರವಾದ ಆತ್ಮೀಯತೆಯಲ್ಲಿ ಬರ್ತಡೆ ವಿಶ್ ಮಾಡಿದ್ದಾಳೆ. ರಾವಣ್ ಚಿತ್ರದಲ್ಲಿ ಅಭಿ ಹೆಸರು ಬೀರಾ.ಆ ಚಿತ್ರದಲ್ಲಿ ಪ್ರಿಯಾಮಣಿ ಅಭಿಯ ಸಹೋದರಿ ಪಾತ್ರದಲ್ಲಿ ನಟಿಸಿದ್ದರು.

ವೆಬ್ದುನಿಯಾವನ್ನು ಓದಿ