ಬಿಂಕದ ಸಿಂಗಾರಿ ಕಾಜಲ್ ಮತ್ತೆ ಬಂದಳು ಟಾಲಿವುಡ್ ನಗರಕ್ಕೆ!

ಶನಿವಾರ, 4 ಜನವರಿ 2014 (10:34 IST)
PR
ಕೆಲವು ದಿನಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಿಂದ ದೂರ ಸರಿದಿದ್ದ ನಟಿ ಕಾಜಲ್ ಅಗರವಾಲ್ ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ನಟಿಸಲು ಸಿದ್ಧ ಆಗುತ್ತಿದ್ದಾಳೆ. ಆಕೆಗೆ ಚಂದಮಾಮ ಚಿತ್ರದ ಮುಖಾಂತರ ಒಳ್ಳೆಯ ತಿರುವು ನೀಡಿದ್ದ ಕೃಷ್ಣ ವಂಶಿ ಅವರ ಚಿತ್ರದಲ್ಲಿ ನಟಿಸುವುದಕ್ಕೆ ಅಂಗೀಕಾರ ನೀಡಿದ್ದಾಳಂತೆ!ಆಕೆ ರಾಮಚರಣ್ ತೇಜಾ ನಟಿಸುತ್ತಿರುವ ಚಿತ್ರದಲ್ಲಿ ಮತ್ತೆ ನಟಿಸಲು ಸಮ್ಮತಿ ನೀಡಿದ್ದಾಳಂತೆ. ಈವರೆಗೂ ಆ ಪಾತ್ರವನ್ನು ತಮನ್ನಾ ಮಾಡುವುದಾಗಿ ಸುದ್ದಿ ಹರಡಿತ್ತು.

ಆದರೆ ಅಂತಿಮವಾಗಿ ಅದು ಈಗ ಕಾಜಲ್ ಅಗರವಾಲ್ ಕೈ ಸೇರಿದೆ. ತನ್ನ ಪಾತ್ರದ ವಿಷಯದಲ್ಲಿ ಅಸಂತೃಪ್ತಿ ಹೊಂದಿ ಅದನ್ನು ಕೈ ಬಿಟ್ಟ ವಿಕ್ಟರಿ ವೆಂಕಟೇಶ್ ಸ್ಥಳದಲ್ಲಿ ಈಗ ನಟ ಶ್ರೀಕಾಂತ್ ಬಂದಿದ್ದಾರೆ. ಈ ವಿಷಯವನ್ನು ನಿರ್ದೇಶಕ ಕೃಷ್ಣವಂಶಿ ಸ್ವಯಂ ತಿಳಿಸಿದ್ದಾರೆ.

ಮಗಧೀರ , ನಾಯಕ್ ಬಳಿಕ ಕಾಜಲ್ ಮತ್ತೆ ರಾಮ ಚರಣ್ ಜೊತೆ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ರಾಮಚರಣ್ ಜೊತೆ ಮೂರನೇ ಬಾರಿ ನಟಿಸುತ್ತಿರುವುದಕ್ಕೆ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿದೆಯಂತೆ. ತಮ್ಮಿಬ್ಬರದ್ದು ಹಿಟ್ ಕಾಂಬಿನೇಶನ್ ಎನ್ನುವುದನ್ನು ತಾವು ನಿರೂಪಿಸುವುದಾಗಿ ಹೇಳಿದ್ದಾಳೆ ಈ ಚೆಲುವೆ!

ವೆಬ್ದುನಿಯಾವನ್ನು ಓದಿ