ಬಿಗ್ಬಾಸ್ 7ನಲ್ಲಿ ನಟಿಸುತ್ತಿಲ್ಲ ಎಂದ ಅಮಿಷಾ ಪಟೇಲ್

ಬುಧವಾರ, 14 ಆಗಸ್ಟ್ 2013 (10:55 IST)
PR
ನಾನು ಕೆಲಸವಿಲ್ಲದೆ ಸುಮ್ಮನೆ ಕುಳಿತರೂ ಯೋಚನೆಯಿಲ್ಲ. ರಿಯಾಲಿಟಿ ಶೋನಲ್ಲಿ ಮಾತ್ರ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ ಅಮಿಷಾ ಪಟೇಲ್. ಬಿಗ್ಬಾಸ್ 7ನಲ್ಲಿ ಅಮಿಷಾ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಹರಡಿದ್ದಕ್ಕೆ ಆಕೆ ಸ್ವಲ್ಪ ಗರಂ ಆದಂತಿತ್ತು. ಶೋನಲ್ಲಿ ಕೆಲವರಿಗೆ ತಮ್ಮ ಖಾಸಗಿ ಬದುಕನ್ನು ತೆರೆ ಮುಂದೆ ತೋರಿಸುವ ಖಯಾಲಿ ಇರಬಹುದು. ಆದರೆ ನನಗೆ ಅದರ ಅಗತ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸುಮ್ಮನೆ ಕುಳಿತವರು ಇಂತಹ ವದಂತಿ ಹಬ್ಬಿಸುತ್ತಾರೆ, ಇದರತ್ತ ಹೆಚ್ಚು ಗಮನ ಕೊಡಬೇಡಿ ಎಂದೂ ಅವರು ಹೇಳಿದ್ದಾರೆ.

ನಾನು ನವೆಂಬರ್ನಿಂದ ಸನ್ನಿ ಡಿಯೋಲ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದೇನೆ, 100 ಕೋಟಿ ಕೊಡುತ್ತೇನೆ ಎಂದರೂ ನಾನು ಎಲ್ಲರ ಎದುರು ಹೇಗೆ ತಿನ್ನುತ್ತೇನೆ, ಹೇಗೆ ನಿದ್ರಿಸುತ್ತೇನೆ, ಹೇಗೆ ಎದ್ದು ಹಲ್ಲುಜ್ಜುತ್ತೇನೆ ಎಂದು ತೋರುವ ಇಚ್ಛೆ ನನಗಿಲ್ಲ ಎಂದಿದ್ದಾರೆ ಆಮಿಷಾ. ಈ ಶೋನಿಂದ ಶಿಲ್ಪಾ ಶೆಟ್ಟಿ ತಮ್ಮ ಬದುಕಿನಲ್ಲಿ ನೆಲೆ ಕಂಡುಕೊಂಡರು ಎಂದಿದ್ದಕ್ಕೆ ಶಿಲ್ಪಾಗೆ ಆ ಚಿತ್ರ ಪ್ರಿಯಕರನನ್ನು ಹುಡುಕಿಕೊಳ್ಳಲು ನೆರವಾಯಿತು. ಸದ್ಯ ನಾನೇನು ನನ್ನ ಕರಿಯರ್ ಅಥವಾ ಪ್ರಿಯಕರನ ಹುಡುಕಾಟದಲ್ಲಿಲ್ಲ ಎಂದಿದ್ದಾರೆ ಅವರು. ಅಮಿತಾಭ್ ಬಚ್ಚನ್ ನಡೆಸಿಕೊಡುವಂತಹ ರಿಯಾಲಿಟಿ ಶೋಗಳು ಮಾತ್ರ ನನಗೆ ಇಷ್ಟವಾಗುತ್ತವೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ