ಬಿಗ್ ಬಾಸ್ 8 ಕ್ಕೆ ಸಲ್ಮಾನ್ ಖಾನ್ ಬದಲಾಗಿ ರಣಬೀರ್ ಕಪೂರ್?
ಶುಕ್ರವಾರ, 17 ಜನವರಿ 2014 (11:33 IST)
PR
ಭಾರತದ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ಗಲಾಟೆ ಮಾಡಿದ್ದು ಬಿಗ್ ಬಾಸ್. ಕಲರ್ ವಾಹಿನಿಯ ಈ ರಿಯಾಲಿಟಿ ಶೋನಲ್ಲಿ ಪ್ರೆಸೆಂಟರ್ ಆಗಿದ್ದ ಸಲ್ಮಾನ್ ಖಾನ್ ಮಾತಿ ಶೈಲಿಗೆ ಮರುಳಾಗಿ ಅನೇಕ ವೀಕ್ಷಕರು ಟೀವಿ ಸೆಟ್ ಮುಂದೆ ಕುಳಿತು ಬಿಡುತ್ತಿದ್ದರು. ಆತ ಸಹ ತನ್ನದೇ ಆದ ವಿಭಿನ್ನ ಶೈಲಿಯಿಂದ ಎಲ್ಲರ ಗಮನ ಸೆಳೆದು ಅ ಕಾರ್ಯಕ್ರಮ ಹೆಚ್ಚು ಹಿಟ್ ಆಗುವಂತೆ ಮಾಡಿದ್ದರು. ಅವರ ಮಾತುಗಾರಿಕೆಯಿಂದ ಆ ವಾಹಿನಿಗೆ ಮತ್ತು ಸಲ್ಮಾನ್ ಖಾನ್ ಜೇಬಿಗೆ ಸಾಕಷ್ಟು ಹಣ ಸೇರ್ರಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ನಡೆದ ಅನೇಕ ಸಂಗತಿಗಳಿಂದ ಬೇಸತ್ತ ಸಲ್ಮಾನ್ ತಮಗೆ ಈ ಷೋ ವಾಕರಿಕೆ ಬರುವಂತಿದೆ ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು.
ಎಲ್ಲರು ನಿರೀಕ್ಷಿಸಿದಂತೆ ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್ ನಲ್ಲಿ ಇರುವುದಿಲ್ಲ. ಅವರ ಬದಲಾಗಿ ಯಾರು ಈ ಜಾಗದಲ್ಲಿ ವಿರಾಜಮಾನರಾಗುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಬಾಲಿವುಡ್ನಲ್ಲಿ ಓಡಾಡುತ್ತಿರುವ ಹೆಸರು ರಣಬೀರ್ ಕಪೂರ್. ಬಿಟೌನ್ ನಲ್ಲಿ ಇನ್ನು ಕಣ್ಣು ಬಿಡುತ್ತಿರುವ ಹಸುಳೆಗೆ ಕೌನ್ಸಿಲಿಂಗ್ ಮಾಡುವುದಕ್ಕೆ ಏನು ಗೊತ್ತು ಎಂದು ಮೂಗು ಮುರಿಯುವವರಿಗೆ ಒಂದು ಸಂಗತಿ ಗೊತ್ತಿರಲಿ, ಇಂತಹ ಕಾರ್ಯಕ್ರಮಗಳ ನಿರೂಪಕರು ಅದರಲ್ಲೂ ಹೆಚ್ಚಿನವರು ಗಿಣಿ ಪಾಠ ಒಪ್ಪಿಸುವ ಕೆಲ್ಸಕ್ಕಷ್ಟೇ ಸೀಮಿತ.. ಸೊ ಅಂತಹ ಕೆಲಸ ನಟನೆ ಮಾಡುವವರಿಗೆ ಎಂದಿಗೂ ಕಷ್ಟ ಅಲ್ಲ ತಾನೇ!