ಬಿಪಾಸ ಬಸು ಬರ್ತಡೇ ದಿನ ಏನಾಯ್ತು ಗೊತ್ತೇ?

ಗುರುವಾರ, 9 ಜನವರಿ 2014 (11:46 IST)
PR
ಬಾಲಿವುಡ್ ಚಿತ್ರದ ಸೂಪರ್ ಸ್ಟಾರ್ ಗಳು ಮತ್ತು ಸ್ಟಾರಿಣಿಯರು ತಮಗೆ ಇಷ್ಟ ಬಂದಂಗೆ ಇರ್ತಾರೆ, ವರ್ತಿಸುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಪೂರಕವಾದ ಒಂದು ಘಟನೆ ಹೇಳುತ್ತೇವೆ. ಜನವರಿ 7 ರಂದು ಬಿಪಾಸ ಬಸು ಜನ್ಮದಿನ ಇತ್ತು. ಅಂದು ರಾತ್ರಿ ಆಕೆ ಮಾಡಿದ ಗದ್ದಲ-ಗಲಾಟೆಗೆ ಸಿಟ್ಟಾದ ಪೊಲೀಸರು ವಾರ್ನ್ ಮಾಡಿದರಂತೆ. ಅಷ್ಟಾದರೂ ಅವಳು ಅವರಿಗೆ ಕ್ಯಾರೆ ಅನ್ನದೆ ತನಗಿಷ್ಟ ಬಂದಂಗೆ ಆಡಿದಳಂತೆ.

ತನ್ನ ಬರ್ತಡೇ ದಿನದ ಕಾರ್ಯಕ್ರಮವನ್ನು ಮಧ್ಯಾನ್ಹ ರೆಸ್ಟೋರೆಂಟ್ ನಲ್ಲಿ ಆಚರಿಸಿದ ಈ ಬ್ಲಾಕ್ ಬ್ಯೂಟಿ ಆ ಬಳಿಕ ರಾತ್ರಿ ತನ್ನ ಪರಮಾಪ್ತರಿಗೆಂದು ಮನೆಯ ಮೇಲಿನ ಟೆರೆಸ್ ನಲ್ಲಿ ಭರ್ಜರಿ ಪಾರ್ಟಿಯನ್ನು ಇಟ್ಟಿದ್ದಳು. ಅಪಾರ್ಟ್ ಮೆಂಟ್ ಮೇಲೆ ಡಿಜೆ . ಸೌಂಡ್ ಹಾಕಿ ಸಿಕ್ಕಾಪಟ್ಟೆ ಗದ್ದಲ ಮಾಡಿದರಂತೆ ಬಂದವರು. ಇದರಿಂದ ಪಾಪದ ಅಪಾರ್ಟ್ ಮೆಂಟ್ ವಾಸಿಗಳಿಗೆ ನಿದ್ರೆನೇ ಇಲ್ಲ. ಅವರು ತಕ್ಷಣ ಪೊಲೀಸರಿಗೆ ದೂರು ನೀಡಿದರು. ಪೋಲೀಸರು ಬಂದು ವಿನಯದಿಂದ ಸೌಂಡ್ ಕಡಿಮೆ ಮಾಡಮ್ಮ ಅಂದ್ರು , ಸ್ವಲ್ಪ ಹೊತ್ತು ಕಡಿಮೆ ಮಾಡಿ ಮತ್ತೆ ಜೋರು ಮಾಡಿದಳು ಈ ಸುಂದರಿ. ಇದರಿಂದ ಸಿಟ್ಟಾದ ಪೊಲೀಸರು ಆಕೆಯ ಬಳಿ ಇದ್ದ ಸೌಂಡ್ ಬಾಕ್ಸ್ ಎತ್ತಿಕೊಂಡು ಹೋದರಂತೆ ,ಆ ಬಳಿಕ ಅವಳು ತನ್ನ ಮೊಬೈಲ್ ಬಳಸಿ ಫ್ರೆಂಡ್ಸ್ ಜೊತೆ ಕುಣಿದು ಕುಪ್ಪಳಿಸಿದಳಂತೆ! ಛೆ! ಇವಳಿಗೆ ಮಾನ ಹೋದ್ರು ಬುದ್ಧಿ ಬರಲೇ ಇಲ್ಲ ಎಂದು ಕೆಂಡ ಕಾರಿದರಂತೆ ಬಿಟೌನ್ ನವರು !

ವೆಬ್ದುನಿಯಾವನ್ನು ಓದಿ