ಮಮ್ಮುಟ್ಟಿ ಅಳಿಯ ಸೌದಾನ್ ಗೆ ವಿಲನ್ ಪಾತ್ರ ಮಾಡೋಕೆ ಇಷ್ಟ ಅಂತೆ !

ಬುಧವಾರ, 22 ಜನವರಿ 2014 (09:26 IST)
PR
ಮೆಗಾ ಸ್ಟಾರ್ ಮಮ್ಮುಟ್ಟಿ ಅವ್ರ ಸೋದರ ಅಳಿಯ ಅಷ್ಕರ್ ಸೌದಾನ್ ಅವರು ಮಿತ್ರನ್ ಮುಖಾಂತರ ಮಲ್ಲು ಲ್ಯಾಂಡ್ ಗೆ ಎಂಟ್ರಿ ಆದರು. ಅದರಲ್ಲಿ ಅವರು ಖಳನಟನ ಪಾತ್ರದಲ್ಲಿ ಇದ್ದರು. ಈಗ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ . ಅವರ ಎರಡನೇ ಚಿತ್ರ ಸಂಘುಮುಘಮ್ . ಇದನ್ನು ಸುಕು ಮೆನನ್ ನಿರ್ದೇಶಿಸುತ್ತಿದ್ದಾರೆ. ಇದು ಹಾರರ್ ಅಂಶಗಳನ್ನು ಒಳಗೊಂಡ ಚಿತ್ರವಾಗಿದೆಯಂತೆ. ನಾನು ಇದು ಹಾರ ಕಥೆಯನ್ನು ಒಳಗೊಂಡಿರುವುದರಿಂದ ಆಯ್ಕೆ ಮಾಡಿಕೊಳ್ಳಲಿಲ್ಲ, ಕಥೆಯು ಆಸಕ್ತಿಕರವಾಗಿತ್ತು, ಆದ ಕಾರಣ ಅದರಲ್ಲಿ ನಟಿಸಲು ಸಮ್ಮತಿಸಿದೆ ಎಂದು ಹೇಳಿದ್ದಾರೆ. ಈ ಮೊದಲು ಮಾಡಿದ ಚಿತ್ರವೂ ಸಹ ಹಾರ ಕಥೆಗಳನ್ನು ಹೊಂದಿತ್ತು.

ಅಷ್ಕರ್ ತಮಿಳು ಮಾತು ಮಲೆಯಾಳಂ ಭಾಷೆಗಳೆರಡರಲ್ಲೂ ವಿಲನ್ ಪಾತ್ರದಲ್ಲಿ ಮಾಡುತ್ತಿದ್ದಾರೆ ಇವರಿಗೆ ಖಳನಟನ ಪಾತ್ರದಲ್ಲಿ ಮಿಂಚಲು ಇಷ್ಟವಂತೆ.ತಮಿಳು ಚಿತ್ರ ವೆಲಚೆರಿಯಲ್ಲಿ ನಟಿಸುವ ಅವಕಾಶ ದೊರೆತಿದೆ.

ವೆಬ್ದುನಿಯಾವನ್ನು ಓದಿ