ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

Krishnaveni K

ಶನಿವಾರ, 19 ಜುಲೈ 2025 (10:51 IST)
ಬೆಂಗಳೂರು: ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಾಯಕರಾಗಿ ಅಭಿನಯಿಸಿರುವ ಚೊಚ್ಚಲ ಸಿನಿಮಾ ಜ್ಯೂನಿಯರ್. ಈ ಸಿನಿಮಾ ಮೊದಲ ದಿನ ಮಾಡಿದ ಗಳಿಕೆಯೆಷ್ಟು ಇಲ್ಲಿದೆ ವಿವರ.

ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ ಎಂದ ತಕ್ಷಣ ಏನೋ ದುಡ್ಡಿದೆ, ಹೀಗಾಗಿ ಸಿನಿಮಾ ಮಾಡ್ತಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಥಿಯೇಟರ್ ಗೆ ಬಂದ ಪ್ರೇಕ್ಷಕರಿಗೆ ಕಿರೀಟಿ ಅಚ್ಚರಿ ಕೊಟ್ಟಿದ್ದಾರೆ. ಒಬ್ಬ ಸಿನಿಮಾ ಹೀರೋಗೆ ಬೇಕಾದ ಎಲ್ಲಾ ವಿದ್ಯೆಗಳನ್ನೂ ಕಲಿತೇ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

ಮೊದಲ ಸಿನಿಮಾದಲ್ಲೇ ಅವರ ಡ್ಯಾನ್ಸ್,ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ಜೆನಿಲಿಯಾ, ಶ್ರೀಲೀಲಾ, ರವಿಚಂದ್ರನ್ ರಂತಹ ದೊಡ್ಡ ತಾರಾಗಣವೇ ಇದೆ. ಜೊತೆಗೆ ದೇವಿ ಪ್ರಸಾದ್ ಸಂಗೀತವಿದೆ. ಆದರೆ ಸರ್ಪೈಸ್ ಪ್ಯಾಕೇಜ್ ಎಂದರೆ ಕರೀಟಿ. ತಾನೊಬ್ಬ ಒಳ್ಳೆ ಡ್ಯಾನ್ಸರ್ ಎಂದು ಮಾತ್ರವಲ್ಲ ಅಭಿನಯದಲ್ಲೂ ಮೊದಲ ಸಿನಿಮಾ ಎಂದು ಸ್ವಲ್ಪವೂ ಸಂಶಯ ಬಾರದಂತೆ ಅಭಿನಯಿಸಿದ್ದಾರೆ.

ಮೊದಲ ದಿನವೇ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 1.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೊಸಬ ನಾಯಕನಾಗಿರುವ ಸಿನಿಮಾಗೆ ಇಷ್ಟು ಕಲೆಕ್ಷನ್ ಆಗಿರುವುದು ವಿಶೇಷವೇ. ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ಬಂದಿರುವ ಕಾರಣಕ್ಕೆ ವೀಕೆಂಡ್ ನಲ್ಲಿ ಕಲೆಕ್ಷನ್ ಹೆಚ್ಚುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ