ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ಲಿಪ್ಲಾಕ್ ಸೀನ್ ಇದ್ಯಾ?

ಶುಕ್ರವಾರ, 17 ಜನವರಿ 2014 (11:35 IST)
PR
ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ನಟಿಸಿದ್ದ 1 ನೆನೊಕ್ಕಡೇನೆ ಚಿತ್ರ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ನಿರೀಕ್ಷಿಸಿದಷ್ಟು ಯಶಸ್ಸು ನೀಡಲಿಲ್ಲ ಎಂಬುದುರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ ಚಿತ್ರದ ನಂತರ ಅವರು ಶ್ರೀನು ವೈಟ್ಲ ಅವರ ನಿರ್ದೇಶನದ ಆಗದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ಯಶಸ್ವಿ ನಿರ್ದೇಶಕರಲ್ಲಿ ಶ್ರೀನು ಸಹ ಒಬ್ಬರಾಗಿದ್ದಾರೆ. ಇವರ ಹೊಸ ಚಿತ್ರ ಆಗಡು ಬಗೆ ಸಾಕಷ್ಟು ನಿರೀಕ್ಷೆಗಳಿವೆ. ಏಕೆಂದರೆ , ಅವರು ನಿರ್ದೇಶಿಸಿದ್ದ ದೂಕುಡು ಅತ್ಯದ್ಭುತವಾದ ಗೆಲುವು ಸಾಧಿಸಿತ್ತು . ಈಗ ಅಂತಹದ್ದೇ ಗೆಲುವು ಕಾಣುವುದಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಶ್ರೀನು. ಆಗಡು ಚಿತ್ರದಲ್ಲಿ ಮಹೇಶ್ ಜೊತೆ ತಮನ್ನಾ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಇವರಿಬ್ಬರ ನಡುವೆ ಲಿಪ್ ಲಾಕ್ ಸೀನ್ ಇದ್ಯಾ ಎನ್ನುವುದೇ ಈಗ ಟಾಲಿವುಡ್ ಮಂದಿಯನ್ನು ಕಾಡುತ್ತಿರುವ ಪ್ರಶ್ನೆ. ಒಂದು ಚಿತ್ರ ಅಂದ ಮೇಲೆ ಚುಂಬನ ಇರಲೇ ಬೇಕು , ಅದು ಅತಿಯಾದರೂ ತಪ್ಪೇನಿಲ್ಲ ಎಂದು ರಾಮ್ ಲೀಲಾದಂತಹ ಸಿನಿಮಾಗಳ ಮುಖಾಂತರ ಸಾಬೀತು ಮಾಡಿದ್ದಾರೆ ಚಿತ್ರಮಂದಿ. ಭಾರತದಲ್ಲಿ ಕೋಟಿ ವೀರರ ಸಾಲಿನಲ್ಲಿ ಟಾಲಿವುಡ್ ನಿರ್ಮಾಪಕರು ಸೇರಿದ್ದಾರೆ. ಅವರು ತಮ್ಮ ಚಿತ್ರಕ್ಕಾಗಿ ಎಂತಹ ಕಸರತ್ತು ಬೇಕಾದರೂ ಮಾಡುತ್ತಾರೆ, ಅದೇ ರೀತಿ ಕಸರತ್ತು ಮಾಡುವವರನ್ನು ದುಡ್ಡು ಸುರಿದು ಕರೆತರುತ್ತಾರೆ. ಇವೆಲ್ಲ ಇದ್ದಬಳಿಕ ಲಿಪ್ ಲಾಕ್ ಸೀನ್ ಇರಲೇ ಬೇಕು.. ಏಕೆಂದರೆ ಅದೀಗ ಟ್ರೆಂಡ್ ಸೊ ಅದು ಇರಲೇ ಬೇಕು.. ಅಂದಂಗೆ ಈಗಾಗಲೇ ಮಹೇಶ್ ತಮನ್ನಾ ಮುದ್ದಾಟ ಆಗಿದೆಯಂತೆ.. ಅದು ತೆರೆಯ ಮೇಲೆ ಬಂದಾಗ ಪ್ರೇಕ್ಷಕರು ನೋಡ ಬಹುದು.. ಅಲ್ಲಿವರೆಗೂ ಕಾಯುವಾ !

ವೆಬ್ದುನಿಯಾವನ್ನು ಓದಿ