ಮಾಧುರಿ ಜೈಸಾ ಕೋಯಿ ನಹಿಂ: ಸಾಹ್ನಿ

ಶುಕ್ರವಾರ, 30 ನವೆಂಬರ್ 2007 (18:59 IST)
IFM
ಶಮೀತ್ ಅಮೀನ್ ನಿರ್ಧೇಶನದ ಚಕ್ ದೇ ಇಂಡಿಯಾದ ಕಲ್ಪನೆಯನ್ನು ಅಕ್ಷರ ರೂಪಕ್ಕೆ ಭಟ್ಟಿ ಇಳಿಸಿದ ಜಯದೀಪ್ ಸಾಹ್ನಿ ಇಂದು ಬಿಡುವಿಲ್ಲದ ಕಥಾ ಚಿತ್ರಕಾರ. ಅಂದ್ ಕಾಲತ್ತಿಲ್ ಧಕ್ ಧಕ್ ಬೇಡಗಿ ಮಾಧುರಿಯ ಪುನರಾಗಮನದ ಘೋಷಣೆಯಂತಿರುವ ಆಜಾ ನಾಚ್‌ ಲೇ ಯ ಚಿತ್ರಕಥೆಯನ್ನು ಇವರೇ ಅಕ್ಷರ ರೂಪಕ್ಕೆ ಸಾಕ್ಷಾತ್ಕರಿಸಿದ್ದಾರೆ.

ಸಂದರ್ಶನದಲ್ಲಿ ಮನ ಬಿಚ್ಚಿ ಮಾತನಾಡಿದ ಅವರು, ಆಜಾ ನಾಚ್‌ ಲೇ ವಿಭಿನ್ನ ಕಥೆ. ಇವರೆಗಿನ ನನ್ನ ಚಿತ್ರ ಜೀವನದಲ್ಲಿ ಮಾಧುರಿಯಂತಹ ಪ್ರತಿಭಾವಂತ ನಟಿಯನ್ನು ನಾನು ನೋಡಿಲ್ಲ. ಅವಳ ನೃತ್ಯ, ಅಭಿನಯ ಸರಿಸಾಟಿ ಇಲ್ಲದ್ದು. ಮಹಿಳೆ, ನೃತ್ಯ ಮತ್ತು ಹೋರಾಟವೇ ಚಿತ್ರದ ಜೀವಾಳ. ಮಹಿಳೆಯೊಬ್ಬಳು ಸಂಗೀತ ಮತ್ತು ನೃತ್ಯವನ್ನು ಜನರ ಜೀವನದ ಒಂದು ಭಾಗವಾಗುವಂತೆ ಮಾಡುವ ಪ್ರಯತ್ನವೇ ಚಿತ್ರದ ಕಥಾ ವಸ್ತು. ಆದಿ ಅವರ ಕಥೆಯನ್ನು ಆಧರಿಸಿ ಬರೆಯಲಾಗಿರುವ ಚಿತ್ರಕಥೆಯಲ್ಲಿ ಕೆಲ ಅಚ್ಚರಿಯ ಪಾತ್ರ ಮತ್ತು ಸನ್ನಿವೇಶಗಳು ಇದ್ದು. ಅವುಗಳನ್ನು ಪ್ರೇಕ್ಷಕ ಇಷ್ಟಪಡುವುದರಲ್ಲಿ ಸಂಶಯವಿಲ್ಲ.

ನೃತ್ಯದಿಂದಲೇ ಪ್ರಸಿದ್ಧಿಯ ಉತ್ತುಂಗಕ್ಕೆ ಬಂದ ಕಲಾವಿದೆ. ಕಥೆಯಲ್ಲಿ ಸಂಗೀತ ಮತ್ತು ನೃತ್ಯಗಳೇ ಮೂಲವಸ್ತುವಾಗಿರುವುದರಿಂದ ಅಂತಹ ಪ್ರತಿಭೆಗೆ ಪಾತ್ರ ಚಿತ್ರಣವನ್ನು ಮಾಡಿಕೊಟ್ಟಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ