ರಣಬೀರ್ ವಡ ಪಾವ್ ಮಾರಿದ್ದು ಯಾಕೆ ಗೊತ್ತೇ?

ಸೋಮವಾರ, 10 ಫೆಬ್ರವರಿ 2014 (09:23 IST)
PR
ಚಾಕಲೇಟ್ ಹೀರೋ ರಣಬೀರ್ ಕಪೂರ್ ಬಗ್ಗೆ ಈಗ ಹೆಚ್ಚಾಗಿ ಬರೆಯುವ ಸಂಗತಿ ಅಂದ್ರೆ ಆತನ ಪ್ರೀತಿ ಮತ್ತು ಆತನ ನಡುವೆ ಇರುವ ಅನೇಕ ಗಾಸಿಪ್ಗಳು . ಆದರೆ ಈ ಬಾರಿ ನಾವು ಹೇಳ ಹೊರಟಿರುವ ಸಂಗತಿ ತುಂಬಾ ಭಿನ್ನವಾಗಿದೆ. ಇಲ್ಲಿ ರಣಬೀರ್ ಸೇಲ್ಸ್ ಮ್ಯಾನ್ ಆದ ಕಥೆಯನ್ನು ತಿಳಿಸುವ ಪ್ರಯತ್ನ ಮಾಡ್ತಾ ಇದ್ದೀವಿ.

ಒಂದು ಕಾಲೇಜಿನ ಬಳಿ ರಣಬೀರ್ ವಡ ಪಾವ್ ಮಾರಾಟ ಮಾಡಿದ್ದಾರೆ . ಆತ ಮಾರಾಟ ಮಾಡಿದ ವಡಾ ಪಾವ್ ಹಾಟ್ ಕೇಕ್ ನಂತೆ ಮಾರಾಟವಾಯ್ತು ಅನ್ನುವ ಸಂಗತಿ ಬಗ್ಗೆ ಹೇಳುವಷ್ಟಿಲ್ಲ. ಮುಖ್ಯವಾಗಿ ರಣಬೀರ್ ನಟನೆ ಬಿಟ್ಟು ಈ ಕೆಲ್ಸಕ್ಕೆ ಬನ್ದಿದ್ದಾರು ಯಾಕೆ ಎನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಅದರ ಬಗ್ಗೆ ವಿವರ ಹೀಗಿದೆ. ಮುಂಬೈನ ಟ್ರಕ್ ಡ್ರೈವರ್ ಒಬ್ಬರ ಮಗಳಿಗೆ ಬ್ಲಡ್ ಕ್ಯಾನ್ಸರ್ ಆಗಿದೆಯಂತೆ.

ಆಕೆಯ ಕಾಯಿಲೆ ಗುಣ ಮಾಡಲು ಬರೋಬ್ಬರೀ ನಾಲ್ಕು ಲಕ್ಷ ರೂಪಾಯಿ ಬೇಕಾಗಿದೆ. ಆತ ಒಂದು ಲಕ್ಷ ರೂಪಾಯಿಗಳಷ್ಟು ಶೇಖರಣೆ ಮಾಡಿದ್ದಾರೆ. ಉಳಿದ ಹಣವನ್ನು ನೀಡಲು ಚಾನೆಲ್ ಒಂದು ಮುಂದೆ ಬಂದಿದೆ. ಆ ಚಾನೆಲ್ ನ ರಿಯಾಲಿಟಿ ಶೋನಲ್ಲಿ ರಣಬೀರ್ ಟ್ರಕ್ ಚಾಲಕನ ಗೆಟಪ್ ನಲ್ಲಿಯೇ ಬರ ಬೇಕು ಎನ್ನುವ ಮನವಿಗೆ ರಣಬೀರ್ ಓಕೆ ಅಂದಿದ್ದು ಅಲ್ಲದೆ ಆ ಬಡ ಕುಟುಂಬಕ್ಕೆ ಈ ರೀತಿ ಸಹಾಯ ಮಾಡಲು ಸಿದ್ಧ ಆಗಿದ್ದಾರೆ.

ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ರಣಬೀರ್ ಇದ್ದರೆ ಟೀಆರ್ಪಿಗೆ ಬರವಿಲ್ಲ ಮತ್ತು ಜಾಹಿರಾತುಗಳು ಹುಡುಕಿಕೊಂಡು ಬರುತ್ತದೆ ಎನ್ನುವುದು ಚಾನೆಲ್ ನವರ ಮುಂದಾಲೋಚನೆ. ಅಷ್ಟೇ ಅಲ್ಲದೆ ವಡಾ ಪಾವನ್ನು ಒಂದು ಕಾಲೇಜಿನ ಬಳಿ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸಹ ಈ ಹುಡುಗಿಯ ಚಿಕಿತ್ಸೆಗೆ ಬಲಸ ಬಹುದು ಎನ್ನುವುದು ಸಹ ರಣಬೀರ್ ಯೋಜನೆ. ಇದು ಓಕೆ ಆಗಿದೆ. ಯಾರು ಐಡಿಯಾ ಆದರೆ ಇಂತಹ ಯೋಜನೆಗ ಳಿಂದ ಬಡವರಿಗೆ ಜೀವದಾನ ಸಿಗಲಿ ಎನ್ನುವುದಷ್ಟೇ ವೆಬ್ ದುನಿಯಾದ ಆಶಯ.

ವೆಬ್ದುನಿಯಾವನ್ನು ಓದಿ