ರವಿವರ್ಮನ್ ಉಗ್ರಂ ಜನವರಿಯಲ್ಲಿ ತೆರೆಗೆ !

ಮಂಗಳವಾರ, 31 ಡಿಸೆಂಬರ್ 2013 (10:02 IST)
PR
ಭಾರತೀಯ ಚಿತ್ರರಂಗದ ಅನೇಕ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಕೇವಲ ಒಂದು ಭಾಷೆಯಲ್ಲಿ ಮಾತ್ರವಲ್ಲ ಎಲ್ಲಾ ಭಾಷೆಗಳಲ್ಲೂ ತೋರಿ ಗೆದ್ದಿದ್ದಾರೆ. ಕೇವಲ ಅವರು ವೈಯುಕ್ತಿಕವಾಗಿ ಗೆದ್ದಿರುವುದು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವು ಅವರ ಸಾಧನೆಯ ಬಗ್ಗೆ ಗುರುತಿಸುವಂತೆ ತಮ್ಮ ಸಾಧನೆ ತೋರಿದ್ದಾರೆ.

ಆ ಪಟ್ಟಿಗೆ ಅನೇಕ ನಟ-ನಟಿಯರು, ತಾಂತ್ರಿಕ ವರ್ಗದವರು ಸೇರಿದ್ದಾರೆ. ಛಾಯಾಗ್ರಾಹಕ ಮತ್ತು ನಿರ್ದೇಶಕ ರವಿವರ್ಮನ್ ಸಹ ಇಂತಹ ಲಿಸ್ಟಿನಲ್ಲಿ ಇದ್ದಾರೆ. 2013ರಲ್ಲಿ ಭರ್ಜರಿ ಯಶಸ್ಸು ನೀಡಿದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ನಟಿಸಿದ್ದ ರಾಮ್ ಲೀಲಾ ಚಿತ್ರದ ಛಾಯಾಗ್ರಹಣವನ್ನು ಇವರೇ ಮಾಡಿದ್ದು. ಇವರು ಬರ್ಫಿ ಚಿತ್ರದ ಛಾಯಾಗ್ರಹಣವನ್ನು ಸಹ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ