ವಿವಾಹದ ಬಳಿಕ ಸೈಫ್ ಬದಲಾಗಿಲ್ಲ: ಕರೀನಾ ಕಪೂರ್ ಸ್ಪಷ್ಟನೆ

ಶುಕ್ರವಾರ, 6 ಸೆಪ್ಟಂಬರ್ 2013 (12:25 IST)
PR
ವಿವಾಹದ ಬಳಿಕ ನಮ್ಮಿಬ್ಬರ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ನಟಿ ಕರೀನಾ ಹೇಳಿದ್ದಾರೆ. ಈ ಮೂಲಕ ಅವರ ಹಾಗೂ ಸೈಫ್ ದಾಂಪತ್ಯದ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್‌ಗಳೆಲ್ಲ ನಿಂತಿವೆ.

ಕಳೆದ ಅಕ್ಟೋಬರ್‌ನಲ್ಲಿ ಈ ಜೋಡಿ ಮದುವೆಯಾಗಿತ್ತು. ಸೈಫ್ ಹಾಗೂ ನನ್ನ ಮಧ್ಯೆ ಹೊಂದಾಣಿಕೆ ಇದ್ದುದರಿಂದ ಮದುವೆಯಾಗಲು ತೀರ್ಮಾನಿಸಿದೆವು. ನಮ್ಮಿಬ್ಬರ ಆಯ್ಕೆ ಒಂದೇ ಆಗಿತ್ತು. ಡೇಟಿಂಗ್‌ನಲ್ಲಿದ್ದಾಗ ಸೈಫ್ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ ಅಲ್ಲದೆ ಮುಂದೆಯೂ ಹಾಗೇ ಇರುತ್ತಾರೆ. ಮದುವೆಯ ಬಳಿಕ ಮಾಧ್ಯಮಗಳಲ್ಲಿ ಗಾಸಿಪ್‌ಗಳು ಹರಿದಾಡುವುದು ಸಾಮಾನ್ಯ. ಆದರೆ ನಿಜ ಜೀವನವೇ ಭಿನ್ನವಾಗಿರುತ್ತದೆ.

ನಮ್ಮಿಬ್ಬರ ಮಧ್ಯೆ ಯಾವುದೇ ನಿಬಂಧನೆಗಳಿಲ್ಲ. ಕೆಲವೊಮ್ಮೆ ಮಾಧ್ಯಮದವರು ಹಾಗೂ ಅಭಿಮಾನಿಗಳು ಕೇಳುವ ಪ್ರಶ್ನೆ ನನಗೆ ಗಲಿಬಿಲಿ ಉಂಟುಮಾಡುತ್ತದೆ.

ನಿಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇದೆಯೇ, ಬದಲಾವಣೆ ಆಗಿದೆಯೇ ಎಂಬಂಥ ಪ್ರಶ್ನೆಗಳು ಅರ್ಥಹೀನ ಎಂಬುದು ನನ್ನ ಭಾವನೆ. ಮದುವೆಗೆ ಮುನ್ನ ನಮ್ಮಿಬ್ಬರ ಭಾವನೆಗಳು ಹೇಗಿವೆಯೋ ಈಗಲೂ ಹಾಗೇ ಇದೆ. ಚಿತ್ರರಂಗಕ್ಕೆ ನನ್ನಿಂದ ವಿವಾಹದ ನಂತರ ಯಾವುದೇ ಬದಲಾವಣೆಗಳಾಗಿಲ್ಲ. ಆಗ ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲೆ ಇತ್ತು. ಈಗ ಗಂಡ. ಸೈಫ್ ಹೊಣೆಗಾರಿಕೆ ಇರುವ ನಟನಷ್ಟೇ ಅಲ್ಲ, ಒಳ್ಳೆಯ ವ್ಯಕ್ತಿ ಎನ್ನುತ್ತಾರೆ ಕರೀನಾ.

ವೆಬ್ದುನಿಯಾವನ್ನು ಓದಿ