ವಿಶ್ವ ಸಿನಿಮಾರುಕಟ್ಟೆಯಲ್ಲಿ 501.35 ಕೋಟಿ ಲಾಭ ಗಳಿಸಿದ ಧೂಂ 3
ಬುಧವಾರ, 8 ಜನವರಿ 2014 (12:13 IST)
PR
ಬಾಲಿವುಡ್ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದ ಚಿತ್ರಗಳು ನೂರು ಕೋಟಿ ಗಳಿಸಿದೆ ಎಂದು ಅರ್ಥ, ಆದರೆ ನಟ ಅಮೀರ್ ಖಾನ್ , ಅಭಿಷೇಕ್ ಬಚ್ಚನ್ ನಟಿಸಿರುವ ಯಶ್ ರಾಜ್ ಫಿಲಿಮ್ಸ್ ನಿರ್ಮಾಣದ ಧೂಮ್ ೩ ಸಾಕಷ್ಟು ದಾಖಲೆಗಳನ್ನು ನಿರ್ಮಾಣ ಮಾಡಿದೆ. .
ಅತ್ಯಂತ ಯಶಸ್ವಿ ಆಕ್ಷನ್ ಚಿತ್ರ ವಿಶ್ವದ ಮಾರುಕಟ್ಟೆಯಲ್ಲಿ ತನಗೊಂದು ಸ್ಥಾನ ಪಡೆದಿದೆ. ಸುಮಾರು 501 .35 ( 83 .56 ಮಿಲಿಯನ್ ) ಕೋಟಿ ರೂಗಳನ್ನು ಗಳಿಕೆ ಮಾಡುವುದರ ಮುಖಾಂತರ ಭಾರತೀಯ ಚಿತ್ರರಂಗ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ಸಂದೇಶ ವಿಶ್ವ ಸಿನಿ ಮಾರುಕಟ್ಟೆಗೆ ತಿಳಿಸಿದೆ. ಇದು ಕೇವಲ ಭಾರತದ ಬಾಕ್ಸಾಫಿಸಿನಲ್ಲಿ ಮಾತ್ರವಲ್ಲದೆ ವಿಶ್ವದಲ್ಲು ತನ್ನ ಗತ್ತು ತೋರಿಸಿದೆ. ಅಲ್ಲದೆ ಮೊತ್ತ ಮೊದಲ ಭಾರತೀಯ ಸಿನಿಮಾ ಇಂತಹ ದಾಖಲೆಯನ್ನು ನಿರ್ಮಿಸಿದೆ ಎನ್ನುತ್ತಿದ್ದಾರೆ ಸಿನಿಮಂದಿ.
ಶಾರುಖ್ ಖಾನ್ ನಟಿಸಿದ್ದ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾದ ರೆಕಾರ್ಡ್ ಸಹ ಬ್ರೇಕ್ ಮಾಡಿತ್ತು. ಆ ಬಳಿಕ ಅನೇಕ ದಾಖಲೆಗಳನ್ನು ಮಾಡುತ್ತಾ ಮುಂದುವರೆಯಿತು. ಒಟ್ಟಾರೆ ಈ ಚಿತ್ರದ ಬಗ್ಗೆ ಇದ್ದ ಅನೇಕ ಬಗೆಯ ನಿರೀಕ್ಷೆಗಳನ್ನು ಇದು ಸಾಬೀತು ಮಾಡಿ ಚಿತ್ರರಂಗದದ ಇತಿಹಾಸದಲ್ಲಿ ಹೊಸದಾದ ಪುಟವನ್ನು ನಿರ್ಮಿಸಿದೆ. !