ಶಾರೂಖ್ ತೆರೆದೆದೆ ನೃತ್ಯ

ಗುರುವಾರ, 13 ಸೆಪ್ಟಂಬರ್ 2007 (18:07 IST)
ಶಾರೂಖ್ ಖಾನ್‌ರ ದರ್ದ್-ಎ0-ಡಿಸ್ಕೊ ಹಾಡು ನಗರದ ಮನೆ ಮಾತಾಗಿದೆ. ವಿಶಾಲ್ ಶೇಖರ್ ಸಂಕಲನ ಮತ್ತು ಜಾವೇದ್ ಅಕ್ತರ್ ಬರೆದಿರುವ ದರ್ದ್ ಎ ಡಿಸ್ಕೊಗೆ ಪರ್ಶಿಯನ್ ಸ್ಪರ್ಶವಿದ್ದರೂ ಒಟ್ಟಾರೆ ಪಾಶ್ಚಿಮಾತ್ಯ ಶೈಲಿಯ ಹಾಡೆಂಬ ಭಾವನೆ ತುಂಬಿದೆ.

ಈ ಹಾಡಿಗೆ ಸಿಕ್ಕಿದ ಪ್ರತಿಕ್ರಿಯೆಗೆ ನಾನು ರೋಮಾಂಚಿತನಾಗಿದ್ದೇನೆ. ಇದು ಶಾರೂಖ್ ಅವರನ್ನು ಮರುಪರಿಚಯಿಸುವ ನನ್ನ ವಿಧಾನ ಎಂದು ಓಂ ಶಾಂತಿ ಓಂ ನಿರ್ದೇಶಕಿ ಫರಾ ಖಾನ್ ನುಡಿಯುತ್ತಾರೆ. ಭಿನ್ನ ಅವತಾರದಲ್ಲಿ ಅಭಿನಯಿಸಿದ ಶಾರೂಖ್ ಖಾನ್‌ಗೆ ಪೂರ್ಣ ಕ್ರೆಡಿಟ್ ಸಲ್ಲುತ್ತದೆ. "

ಶಾರೂಖ್‌ಗೆ ಒಳ್ಳೆಯ ಮೈಕಟ್ಟಿದೆ. ಆದರೆ ಕ್ಯಾಮೆರಾ ಎದುರು ಶರ್ಟನ್ನು ಬಿಚ್ಚಬೇಕಾದಾಗ ಮತ್ತು ಇಡೀ ಪ್ರೇಕ್ಷಕರೇ ವೀಕ್ಷಿಸುತ್ತಿರುವಾಗ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಫರಾ ವಿವರಿಸುತ್ತಾರೆ.

ವೆಬ್ದುನಿಯಾವನ್ನು ಓದಿ