ಶಿಲ್ಪಾ ಶೆಟ್ಟಿ ನಿರ್ಮಾಣದ ಹೊಸ ಚಿತ್ರ ಢಿಸ್ಕಿಯಾಂ

ಗುರುವಾರ, 18 ಜುಲೈ 2013 (10:25 IST)
PR
PR
ಸದ್ದಿಲ್ಲದೆ ಶಿಲ್ಪಾ ಶೆಟ್ಟಿ ತಮ್ಮ ಬ್ಯಾನರ್ನ ಮೊದಲ ಚಿತ್ರ ತಯಾರಿಸಿದ್ದಾರೆ. ಚಿತ್ರದ ಹೆಸರು ಢಿಸ್ಕಿಯಾಂ. ಡಿಕ್ಷನರಿ ತೆಗೆದು ಪದದ ಅರ್ಥ ಹುಡುಕುವ ಅಗತ್ಯವಿಲ್ಲ. ಇದು ಸಾಹಸ ದೃಶ್ಯಗಳಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ಬರುವ ಸದ್ದು.

ಇದೊಂದು ಪಕ್ಕಾ ಫೈಟಿಂಗ್ ಕಮ್ ಕಾಮಿಡಿ ಚಿತ್ರವಂತೆ. ಚಿತ್ರದಲ್ಲಿ ಹರ್ಮನ್ ಬವೇಜಾ ಮತ್ತು ಸನ್ನಿ ಡಿಯೋಲ್ ನಾಯಕರಾಗಿ ನಟಿಸಿದ್ದಾರೆ. ನಾಯಕಿ ಯಾರೆಂದು ಕೇಳಿದರೆ ನಗುವ ಶಿಲ್ಪಾ, ಚಿತ್ರವನ್ನು ನೋಡಿದ ಬಳಿಕ ನಿಮಗೇ ತಿಳಿಯುತ್ತದೆ ನೋಡಿ ಎನ್ನುತ್ತಾರೆ.

ಸ್ವಂತ ಬ್ಯಾನರಿನಲ್ಲಿ ಚಿತ್ರ ಮಾಡುವುದು ನನ್ನ ಬಹುದಿನಗಳ ಕನಸು. ಇದರಿಂದ ಬಾಲಿವುಡ್ಗೆ ಸದಭಿರುಚಿಯ ಚಿತ್ರಗಳನ್ನು ನೀಡಬೇಕು ಎಂದುಕೊಳ್ಳುತ್ತಿದ್ದೆ. ಆ ಆಸೆ ಇಂದು ಈಡೇರಿದೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನೂ ಆರಂಭವಾಗಬೇಕಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇನೆ, ಇದರಲ್ಲಿ ನನ್ನ ಪತಿಯ ಸಹಾಯವೇನು ಇಲ್ಲ. ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ನೆಗೆಟಿವ್ ಆಗಿ ಅವರು ಯೋಚಿಸುವುದೇ ಇಲ್ಲ ಎಂದಿದ್ದಾರೆ ಶಿಲ್ಪಾ.

ಅಂದ ಹಾಗೆ ಇವರ ಬ್ಯಾನರ್ ಹೆಸರು ಎಸೆಂಷಿಯಲ್ ಸ್ಪೋರ್ಸ ಆಂಡ್ ಮೀಡಿಯಾ ಲಿಮಿಟೆಡ್. ವರ್ಷಕ್ಕೆ ಎರಡು ಚಿತ್ರಗಳನ್ನು ನಿರ್ಮಿಸುವುದು ಇವರ ಗುರಿ. ಹೊಸ ನಿರ್ದೇಶಕರಿಗೆ, ನಟ ನಟಿಯರಿಗೆ ಅವಕಾಶ ಕೊಡುವುದಾಗಿಯೂ ಸಂಸ್ಥೆ ಹೇಳಿದೆ.

ವೆಬ್ದುನಿಯಾವನ್ನು ಓದಿ