ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪರಸ್ತ್ರೀ ಸಂಗ ಇಟ್ಟುಕೊಂಡಿದ್ದಾರೆಯೇ?

ಶನಿವಾರ, 26 ಅಕ್ಟೋಬರ್ 2013 (14:51 IST)
PR
PR
ಆಟೋ ಶಂಕರ್, ಒಂದಾಗೋಣ ಬಾ, ಪ್ರೀತ್ಸೋದು ತಪ್ಪಾ ಮತ್ತು ಮದುವೆ ಆಗೋಣ ಬಾ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಪರಸ್ತ್ರೀ ಸಂಗ ಇಟ್ಟುಕೊಂಡಿದ್ದಾರೆಯೇ? ರಾಜ್ ಕುಂದ್ರಾ ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದ ಹೆಸರು 'ಹೌ ನಾಟ್ ಟು ಮೇಕ್ ಮನಿ'ಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ರಾಜ್ ಕುಂದ್ರಾ ಸದಾ ಫೋನ್ ಕಿವಿಗಿಟ್ಟುಕೊಂಡಿದ್ದನ್ನು ನೋಡಿ ಇವರೇನಾದರೂ ಪರಸ್ತ್ರೀಯ ಸಹವಾಸಕ್ಕೆ ಬಿದ್ದಿರಬಹುದೇ ಎಂದು ತಾನು ಭಾವಿಸಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ರಾಜ್ ಕುಂದ್ರಾ ಪುಸ್ತಕವನ್ನು ಬರೆಯುತ್ತಿರುವುದಾಗಿ ಹೇಳಿದ್ದರು. ಆದರೆ ಅದನ್ನು ನಾನು ಗಂಭೀರವಾಗಿ ತೆಗೆದುಕೊಂಡಿರ್ಲಿಲ್ಲ. ಆದರೆ ಅವರು ಅವರು ಗಂಟೆ ಗಟ್ಟಲೆ ಪೋನ್ ಮಾಡುತ್ತಿರುವುದನ್ನು ನೋಡಿ ಅವರು ಪರಸ್ತ್ರೀ ಸಂಬಂಧ ಹೊಂದಿರಬಹುದೇ ಎಂದು ನಾನು ಶಂಕಿಸಿದ್ದೆ. ಆದರೆ ನಂತರ ಅವರು ಸಹ ಬರಹಗಾರ ಆರ್ಯ ಜತೆ ಮಾತನಾಡುತ್ತಿದ್ದರೆಂದು ತಮಗೆ ತಿಳಿದುಬಂತು. ಇದು ತಿಳಿದ ನಂತರ ತಾನು ನಿಟ್ಟುಸಿರುಬಿಟ್ಟಿದ್ದಾಗಿ ಶಿಲ್ಪಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ