ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಚಲನಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಗಾಯಗೊಂಡ ಘಟನೆ ನಡೆದಿದೆ. ತಮ್ಮ ಮುಂಬರುವ ಚಿತ್ರ 'ಹ್ಯಾಪಿ ನ್ಯೂ ಇಯರ್'ನಲ್ಲಿ ಖಾನ್ ಬ್ಯುಸಿಯಾಗಿದ್ದಾಗ ಗಾಯಗೊಂಡಿದ್ದು ಅವರನ್ನು ನಾನಾವತಿ ಆಸ್ಪತ್ರೆಗೆ ಒಯ್ಯಲಾಯಿತು. ಮುಂಬೈನ ಜುಹು ಪ್ರದೇಶದಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ಶಾರೂಕ್ ಮೈಮೇಲೆ ಬಾಗಿಲು ಉರುಳಿಬಿದ್ದಿದ್ದರಿಂದ ಕೈ, ಹಾಗು ಮುಖಕ್ಕೆ ಗಾಯವಾಗಿ ರಕ್ತ ಹರಿಯಲಾರಂಭಿಸಿತು.
ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಮುಂಬೈನ ಪಂಚತಾರಾ ಹೊಟೆಲ್‌ನಲ್ಲಿ ಶೂಟಿಂಗ್ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜತೆ ಅಭಿನಯಿಸಿದ್ದಾರೆ.