ಶ್ರುತಿಗೆ ಒಲಿದ ಗಬ್ಬರ್ ಪ್ರೀತಿ

ಸೋಮವಾರ, 30 ಡಿಸೆಂಬರ್ 2013 (10:08 IST)
PR
ಅದೃಷ್ಟದ ಆಟದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಹೇಳಲು ಹೊರಟಿರುವ ಸಂಗತಿಯೂ ಅಂತಹದ್ದೇ ಆಗಿದೆ. ಈಗ ಬಾಲಿವುಡ್ ನಟರು ಹೆಚ್ಚಾಗಿ ದಕ್ಷಿಣ ಭಾರತ ಚಿತ್ರಗಳತ್ತಲೇ ತಮ್ಮ ಗಮನ ನೆಟ್ಟಿದ್ದಾರೆ. ದಕ್ಷಿಣ ಭಾರತದ ಯಶಸ್ವಿ ಚಿತ್ರಗಳನ್ನು ರೀಮೇಕ್ ಮಾಡುವುದರ ಮೂಲಕ ತಾವು ಯಶಸ್ಸು ಸಾಧಿಸುತ್ತಿದ್ದಾರೆ. ಇದು ಬಾಲಿವುಡ್ ಚಿತ್ರ ನಿರ್ಮಾಣದ ಒಂದು ಭಾಗವಾಗಿದೆ. ಈ ಸಾಲಿಗೆ ನಟ ಅಕ್ಷಯ್ ಕುಮಾರ್ ಅವರು ಸಹ ಸೇರ್ಪಡೆ ಆಗಿದ್ದಾರೆ.

ವಿಜಯ್ ಕಾಂತ್ ನಟಿಸಿದ್ದ ತಮಿಳು ಚಿತ್ರವನ್ನು ಹಿಂದಿಗೆ ಭಾಷಾಂತರಿಸುವ ಸನ್ನಾಹದಲ್ಲಿ ಇದ್ದಾರೆ ನಟ ಅಕ್ಷಯ್. ಇದಕ್ಕೆ ಸಂಬಂಧಿಸಿದಂತೆ ಅವರು ದಕ್ಷಿಣ ಭಾರತ ಮುಖ ಛಾಯೆ ಹೊಂದಿರುವ ನಟಿಗಾಗಿ ಹುಡುಕಾಟ ನಡೆಸಿದ್ದರು.

PR
ಅವರಿಗೆ ಆಗ ಕಂಡಿದ್ದು ಮಲೆಯಾಳಿ ಕುಟ್ಟಿ ಅಮಲಾ ಪಾಲ್ ಅವರನ್ನು ಆಯ್ಕೆ ಮಾಡಿಕೊಂಡರು. ತಾನು ಅಂತೂ ಇಂತೂ ಬಾಲಿವುಡ್ ಮೆಟ್ಟಲು ಹತ್ತುವಂತಾಯಿತು ಎಂದು ಆಕೆ ಖುಷಿ ಪಡುತ್ತಿರುವಾಗಲೇ ಆ ಜಾಗಕ್ಕೆ ಶ್ರುತಿ ಹಾಸನ್ ಆಯ್ಕೆ ಆಗಿದ್ದಾರೆ.

ಎಲ್ಲಾ ರೀತಿಯಲ್ಲೂ ಶ್ರುತಿ ಈ ಪಾತ್ರಕ್ಕೆ ಸೂಟ್ ಅಂತ ಸಾಬೀತಾಗಿ ಅಮಲಾ ಜಾಗಕ್ಕೆ ಶ್ರುತಿ ಬಂದಿದ್ದಾಳೆ .

ಈ ಚಿತ್ರದ ಹೆಸರು ಗಬ್ಬರ್. ಇದೆ ಹೆಸರಿನ ಚಿತ್ರವು ಶ್ರುತಿ ತಾರಾ ಬದುಕಿನಲ್ಲಿ ಮಹತ್ತರವಾದ ತಿರುವು ನೀಡಿತ್ತು. ಈಗ ಹಿಂದಿ ಗಬ್ಬರ್ ಸಹ ಉತ್ತಮ ಫಲಿತಾಮಶ ನೀಡುತ್ತದೆ ಎಂದು ಚಿತ್ರ ಪಂಡಿತರು ನಂಬಿದ್ದಾರೆ. ಈ ಮುಖಾಂತರ ಶ್ರುತಿ ತಮಿಳು-ತೆಲುಗು ಜೊತೆ ಹಿಂದಿಯಲ್ಲೂ ಯಶಸ್ವಿ ನಟಿಯಾಗುವುದರಲ್ಲಿ ಸಂಶಯವೇ ಇಲ್ಲ .ಈ ಚಿತ್ರವನ್ನು ಕ್ರಿಶ್ ನಿರ್ದೇಶಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ