ಸಲ್ಮಾನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ?

ಬುಧವಾರ, 1 ಜನವರಿ 2014 (13:59 IST)
ಸಲ್ಮಾನ್ ಖಾನ್ ಜೊತೆ ನಟಿಸಲು ತನಗೆ ಇಷ್ಟ ಎಂದು ದೀಪಿಕಾ ಪಡುಕೋಣೆ ಇತ್ತೀಚೆಗೆ ಹೇಳಿದ್ದಳು. ಆಕೆಯ ಆಸೆ ಈಗ ನೆರವೇರಿದೆ. ಸೂರಜ್ ಬಾರ್ಜತ್ಯ ಅವರು ದೀಪಿಕ ಪಡುಕೋಣೆಯನ್ನು ಸಂಪರ್ಕಿಸಿದ್ದಾರಂತೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಚಿತ್ರವು ಸದ್ಯದಲ್ಲೇ ಸೆಟ್ಟೇರುತ್ತಿದೆ. ಬಾರ್ಜತ್ಯ ಅವರ ಟೀಂ ಜೊತೆ ಸಲ್ಮಾನ್ ಕೆಲಸ ಮಾಡಿ 14 ವರ್ಷಗಳಾಗಿದೆ. ಇಷ್ಟು ವರ್ಷಗಳ ಬಳಿಕ ಸಲ್ಮಾನ್ ನಟಿಸಿರುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಬಾರ್ಜತ್ಯ. ಹಮ್ ಸಾಥ್ ಸಾಥ್ ಹೈ ಚಿತ್ರವು ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ ಕೊನೆಯ ಚಿತ್ರವಾಗಿತ್ತು.

PR
PR
ಸೂರಜ್ ಅವರು ದೀಪಿಕಾಳನ್ನು ಆಕೆಯ ಬರ್ತಡೇ ಪಾರ್ಟಿಯ ದಿನ ಈ ಬಗ್ಗೆ ಮಾತನಾಡಿದರಂತೆ. ಆದರೆ ವಿಷಯವಿನ್ನೂ ಫೈನಲೈಸ್ ಆಗಿಲ್ಲ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲು ಅನೇಕ ನಟೀಮಣಿಗಳು ಕ್ಯೂನಲ್ಲಿ ಇದ್ದಾರಂತೆ.

ನಾವಿನ್ನೂ ಹೀರೋಯಿನ್ ಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ನಿರ್ಧಾರಕ್ಕೂ ಬಂದಿಲ್ಲ. 15 ದಿನಗಳ ಒಳಗೆ ಸಂಪೂರ್ಣವಾಗಿ ಫೈನಲೈಜ್ ಆಗುವುದಾಗಿ ಮಾಹಿತಿಯಿಂದ ತಿಳಿದು ಬಂದಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆಗೆ ನಟಿಸಲು ಆಯ್ಕೆ ಮಾಡುವ ಹೀರೋಯಿನ್ ಗಳ ಪಟ್ಟಿಯಲ್ಲಿ ಕರೀನಾ ಕಪೂರ್ ಖಾನ್,ಕತ್ರಿನಾ ಕೈಫ್, ಇಲಿಯಾನ ಡಿಸೋಜಾ, ಅನುಷ್ಕಾ ಶರ್ಮ,ಪರಿಣಿತಿ ಚೋಪ್ರಾ ಮುಂತಾದವರು ಇದ್ದಾರಂತೆ. ಈ ಚಿತ್ರದ ಕೆಲಸವು ಈ ವರ್ಷದ ಜೂನ್ ತಿಂಗಳಲ್ಲಿ ಆರಂಭವಾಗುತ್ತದೆಯಂತೆ. ಚಿತ್ರ ಶೂಟಿಂಗ್ ಮುಂಬೈ, ಗುಜರಾತ್ ಮತ್ತು ರಾಜಸ್ತಾನದಲ್ಲಿ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ .

ವೆಬ್ದುನಿಯಾವನ್ನು ಓದಿ