ಸಾಗರಿಕಾ ಬ್ರಾಂಡ್ ಅಂಬಾಸಿಡರ್

ಶುಕ್ರವಾರ, 28 ಸೆಪ್ಟಂಬರ್ 2007 (15:54 IST)
IFM
ಚಕ್ ದೆ ಇಂಡಿಯದಲ್ಲಿ ಸ್ಪೋರ್ಟಿ ಲುಕ್ ನೀಡಿದ ಸಾಗರಿಕಾ ಘಾಟ್ಗೆ ರೀಬಾಕ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಸೌಂದರ್ಯ ಮತ್ತು ಪ್ರತಿಭೆ ಮೇಳೈಸಿರುವ ಘಾಟ್ಗೆ ಕ್ರೀಡಾ ಪರಂಪರೆಯನ್ನೂ ಹೊಂದಿದ್ದು(ಅಥ್ಲೆಟಿಕ್ಸ್‌ನಲ್ಲಿ ರಾಜ್ಯಮಟ್ಟದ ಚಾಂಪಿಯನ್ ಮತ್ತು ಶಾಲಾ ದಿನಗಳಲ್ಲಿ ಹಾಕಿ ಆಟಗಾರ್ತಿ) ಬ್ರಾಂಡ್ ಅಂಬಾಸಿಡರ್‌ಗೆ ಸೂಕ್ತವೆನಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾಗರಿಕಾ, ತಾನು ಶಾಲಾದಿನದಿಂದ ಕ್ರೀಡಾಳು ಮತ್ತು ಕ್ರೀಡಾ ಮನೋಭಾವ ಬಿಂಬಿಸುವ ಚಕ್ ದೆ ಇಂಡಿಯದ ಅಭಿನಯದಿಂದ ರೀಬಾಕ್‌ನ ಬ್ರಾಂಡ್ ತತ್ವದಲ್ಲಿ ಗುರುತಿಸಿಕೊಳ್ಳಲು ಸುಲಭವಾಯಿತು ಎಂದಿದ್ದಾರೆ.

ಇದಿಷ್ಟೇ ಅಲ್ಲವಂತೆ, ದೈಹಿಕ ತರಬೇತಿ ಪಡೆದು ರೀಬಾಕ್ ಫಿಟ್‌ನೆಸ್ ಇನ್‌ಸ್ಟ್ರಕ್ಟರ್ ಕೂಡ ಆಗುವುದು ಅವರಿಗೆ ರೋಮಾಂಚನ ಉಂಟುಮಾಡಿದೆಯಂತೆ.

ವೆಬ್ದುನಿಯಾವನ್ನು ಓದಿ